Wednesday, October 18, 2023

ನೆರೆ ಪೀಡಿತ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್‍ ಭೇಟಿ

Must read

ಬಂಟ್ವಾಳ: ಜಿಲ್ಲೆಯಲ್ಲಿ ನೆರೆ ಜಾಸ್ತಿಯಾಗುತ್ತಿದ್ದು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ ಹಾಗಾಗಿ ದ.ಕ‌.ಜಿಲ್ಲೆಯ ಲ್ಲಿ ಜಿಲ್ಲಾಧಿಕಾರಿ ಯವರ ನೇತ್ರತ್ವದಲ್ಲಿ ಜನರಿಗೆ ಪೂರ್ಣಪ್ರಮಾಣದ ಸಕಲ ವ್ಯವಸ್ಥೆ ಗಳನ್ನು ಕಲ್ಪಿಸಲಾಗಿದೆ, ಜನರು ಭಯಬೀತರಾಗುವ ಅವಶ್ಯ ಕತೆಯಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.

ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಜೊತೆ ನೆರೆಯಿಂದ ಅವೃತವಾಗಿರುವ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಿಗೆ ಬೇಟಿ ನೀಡಿದ ಬಳಿಕ ಮಾಧ್ಯಮವರ ಜೊತೆ ಮಾತನಾಡಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಕೂಡ ನೆರೆಯಿಂದ ಸಿಲುಕಿದ ಜನರನ್ನು ರಕ್ಷಣೆ ಮಾಡುವ ಕಾರ್ಯ ಶಾಸಕ ರಾಜೇಶ್ ನಾಯ್ಕ್ ಅವರ ತಂಡ ಹಾಗೂ ಅಧಿಕಾರಿಗಳಿಂದ ಇಡೀ ರಾತ್ರಿಯಿಂದ ನಡೆಯುತ್ತಿದೆ ಎಂದು ಅವರು ಹೇಳಿದರು.
ಬಂಟ್ವಾಳ ದ ಮೂರು ಕಡೆಗಳಲ್ಲಿ ಶಾಸಕರ ನೇತ್ರತ್ವದಲ್ಲಿ ಗಂಜಿ ಕೇಂದ್ರ ಗಳನ್ನು ಮಾಡಲಾಗಿದೆ. ವಸತಿ ಸೌಕರ್ಯಗಳನ್ನು ಕೂಡ ಮಾಡಲಾಗಿದೆ.
ಶಾಸಕರ ಕಾರ್ಯಾಲಯ, ಅವರ ತಂಡ, ಕೇಂದ್ರ ದ ಎನ್.ಡಿ.ಅರ್.ಎಪ್.ಹಾಗೂ ಅಗ್ನಿಶಾಮಕ ದಳ, ಪೋಲೀಸ್ ಸಿಬ್ಬಂದಿಗಳು ತಾಲೂಕಿನ ಅಧಿಕಾರಿ ಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ದೇವದಾಸ ಶೆಟ್ಟಿ , ಗೋವಿಂದ ಪ್ರಭು, ರಮಾನಾಥ ಪೈ, ಲೋಹಿತ್ ಪನೋಲಿಬೈಲು, ರಮಾನಾಥ ರಾಯಿ ಮತ್ತಿತರರು ಉಪಸ್ಥಿತರಿದ್ದರು.

More articles

Latest article