






ವಿಟ್ಲ: ಕರ್ನಾಟಕ ಅರಣ್ಯ ಇಲಾಖೆ ಬಂಟ್ವಾಳ ವಲಯ ಮತ್ತು ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವ ವಿದ್ಯಾಲಯ ಹಾಗು ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆ, ಪೆರ್ನೆ, ಬಿಳಿಯೂರು ಒಕ್ಕೂಟಗಳ ಸಹಯೋಗದಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್, ಇಕೋ ಕ್ಲಬ್, ಅಯೋಧ್ಯ ಫ್ರೆಂಡ್ ಕ್ಲಬ್ಗಳ ಸಹಕಾರದೊಂದಿಗೆ ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವ ವಿದ್ಯಾಲಯದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಲಯ ಅರಣ್ಯಾಧಿಕಾರಿ ಯಶೋಧರ ಮಾತನಾಡಿ ವನಮಹೋತ್ಸವ, ಪರಿಸರ, ಗಿಡಮರಗಳೇ ನದಿ ನೀರಿನ ಮೂಲ. ಗಿಡಮರಗಳನ್ನು ನೆಟ್ಟು ಬೆಳೆಸಬೇಕು ಎಂದು ತಿಳಿಸಿದರು. ಕಾಲೇಜು ಪ್ರಿನ್ಸಿಪಾಲ್ ಶೇಖರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಗಳು ಚಲನಶೀಲವಾದರೆ ಸಂಗಡಿಗರು ಕ್ರಿಯಾಶೀಲರಾಗುತ್ತಾರೆ. ಸಾರ್ವಜನಿಕ ಸ್ಥಳ, ಸಂಸ್ಥೆಗಳಲ್ಲಿ ಗಿಡಗಳನ್ನು ನೆಟ್ಟರೆ ಅದರಲ್ಲಿ ಸಿಗುವ ನೆಮ್ಮದಿ ಬೇರೆಲ್ಲೂ ಸಿಗದು ಎಂದರು.
ಅರಣ್ಯಾಧಿಕಾರಿ ಜಿತೇಶ್ ಭಾಗವಹಿಸಿದ್ದರು. ಧರ್ಮಸ್ಥಳ ಗಾಮೀಣ ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಸ್ವಾಗತಿಸಿದರು. ಯೋಜನೆ ಸದಸ್ಯ ಪುರುಶೋಥಮ ವಂದಿಸಿದರು. ಮುಖ್ಯಗುರು ಶಿವರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀ ದೇವಿಕ್ ಭಾಗವಹಿಸಿ ಹಾವುಗಳ ಬಗ್ಗೆ ಮಾಹಿತಿ ನೀಡಿದರು.
ಇಂದಿರಾ ಪ್ರಾರ್ಥನೆ ಹಾಡಿದರು. ಅಯೋಧ್ಯಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು ಉಪಸ್ಥಿತರಿದ್ದರು. ಇಕೋ ಕ್ಲಬ್ ಸಂಚಾಲಕರಾದ ಅನಿಲ್ ಕುಮಾರ್ ಮತ್ತು ಚಂದ್ರಹಾಸ ರೈ ಸಂಯೋಜಿಸಿದರು. 250 ವಿದ್ಯಾರ್ಥಿಗಳು ವನಮಹೋತ್ಸವದಲ್ಲಿ ಭಾಗವಹಿಸಿದರು.





