

ಬಂಟ್ವಾಳ: ನೆರೆ ಪೀಡಿತ ಪ್ರದೇಶಗಳಿಗೆ ಮಂಗಳೂರು ಆಯುಕ್ತ ರವಿ ಚಂದ್ರ ನಾಯಕ್, ತಹಶೀಲ್ದಾರ್ ರಶ್ಮಿ. ಎಸ್.ಆರ್. ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಎ.ಎಸ್.ಪಿ.ಸೈದುಲು ಅಡಾವತ್ ಬೇಟಿ ನೀಡಿದರು.















ನೇತ್ರಾವತಿ ನದಿಯ ನೀರಿನ ಮಟ್ಟ 10.04 ಅಗಿದ್ದು ತಗ್ಗುಪ್ರದೇಶಗಳು ಜಲಾವೃತಗೊಂಡಿದೆ .
ನೇತ್ರಾವತಿ ನದಿ ಕಿನಾರೆಯ ಬಹುತೇಕ ಎಲ್ಲಾ ಮನೆಗಳು ಅಂಗಡಿಗಳು ಜಲಾವೃತವಾಗಿವೆ.
ಮುಂಜಾಗ್ರತಾ ಕ್ರಮವಾಗಿ ನದಿ ಕಿನಾರೆ ಗೆ ಯಾರೂ ಹೋಗದಂತೆ ಸೂಚನೆ ನೀಡಲಾಗಿದೆ.
ಪಾಣೆಮಂಗಳೂರು ಅಲಡ್ಕ ರಸ್ತೆ, ಕಂಚಿಕಾರ್ ಪೇಟೆ ರಸ್ತೆ ಹಾಗೂ ಬಸ್ತಿಪಡ್ಪು, ಜಕ್ರಿಬೆಟ್ಟು ರಸ್ತೆ ಗಳು ಸಂಚಾರ ಕಡಿತಗೊಳಿಸಿದೆ.








