

ವಿಟ್ಲ: ಕೊಡಂಗಾಯಿ ಟಿಪ್ಪುನಗರದ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವತಿಯಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ ದಾರುನ್ನಜಾತ್ ಸಭಾ ಭವನದಲ್ಲಿ ಜರಗಿತು.
ದಾರುನ್ನಜಾತ್ ಅಧ್ಯಕ್ಷ ಪಿ.ಕೆ.ಅಬೂಬಕರ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಾರುನ್ನಜಾತ್ ಶರೀಅತ್ ಕಾಲೇಜು ಪ್ರಿನ್ಸಿಪಾಲ್ ಅಬ್ದುಲ್ ಖಾದರ್ ಫೈಝಿ ಉದ್ಘಾಟಿಸಿದರು. ದಾರುನ್ನಜಾತ್ ಮುದರ್ರಿಸ್ ಮುಹಮ್ಮದ್ ಅಲ್ ಪಾಳಿಲಿ ಅನುಸ್ಮರಣಾ ಪ್ರಭಾಷಣ ಮಾಡಿದರು.
ಎಸ್ಎಂಎ ರಾಜ್ಯ ಉಪಾಧ್ಯಕ್ಷ ಹಾಜಿ ಹಮೀದ್ ಕೊಡಂಗಾಯಿ ಪ್ರಾಸ್ತಾವಿಸಿದರು. ವಾಲೆಮುಂಡೋವು ಉಸ್ತಾದ್ ದಿಕ್ರ್ ಮಜ್ಲಿಸಿಗೆ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ದಾರುನ್ನಜಾತ್ ಅಬುಧಾಬಿ ಸಮಿತಿ ಅಧ್ಯಕ್ಷ ಯೂಸುಫ್, ಎಸ್ಎಂಎ ವಿಟ್ಲ ರೀಜನಲ್ ಅಧ್ಯಕ್ಷ ಹಾಜಿ ಉಸ್ಮಾನ್, ಯೂಸುಫ್ ಹಾಜಿ ಕಡಂಬು, ಎಸ್ವೈಎಸ್ ಟಿಪ್ಪುನಗರ ಅಧ್ಯಕ್ಷ ಇಬ್ರಾಹಿಂ, ಹಾಫಿಲ್ ಶರೀಫ್ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್, ಹಮೀದ್ ಎಸ್. ಉಪಸ್ಥಿತರಿದ್ದರು. ಅಬ್ದುರ್ರಝಾಕ್ ಸಅದಿ ಕೊಡಿಪ್ಪಾಡಿ ಸ್ವಾಗತಿಸಿದರು. ನಾಸಿರ್ ವಂದಿಸಿದರು.







