

ಬಂಟ್ವಾಳ, ಜು. ೧೯: ರವಿವಾರ ರಾತ್ರಿಯಿಂದ ಬಂಟ್ವಾಳ ತಾಲೂಕಿನಾದ್ಯಂತ ಭಾರಿ ಗಾಳಿಮಳೆಯಾಗಿದೆ. ಸೋಮವಾರವೂ ಎಡೆಬಿಡದೆ ಭಾರೀ ಮಳೆ ಸುರಿದಿದ್ದು, ತಾಲೂಕಿನ ಮೂರು ಮನೆಗಳಿಗೆ ತೀವ್ರ ಹಾನಿಯಾಗಿದ್ದು, ನಷ್ಟ ಉಂಟಾಗಿದೆ.
ಮೇರಮಜಲು ಗ್ರಾಮದ ಲೀಲಾವತಿ ಎಂಬವರ ಮನೆ, ಪುದು ಗ್ರಾಮದ ಅಚ್ಚಮ್ಮ ಎಂಬವರ ಮನೆ ಹಾಗೂ ರಾಯಿ ಗ್ರಾಮದ ಯಮುನಾ ಎಂಬವರ ಮನೆಗಳಿಗೆ ತೀವ್ರ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಬಗ್ಗೆ ಬಂಟ್ವಾಳ ವಿಪತ್ತು ನಿರ್ವಹಣಾ ವಿಭಾಗ ಮಾಹಿತಿ ತಿಳಿಸಿದೆ.








