






ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಅಮ್ಟೂರು ಗ್ರಾಮದ ಸಕ್ರಿಯ ಸದಸ್ಯತ್ವ ಅಭಿಯಾನ ಹಾಗೂ ವನಮಹೋತ್ಸವ ಕಾರ್ಯಕ್ರಮವು ಇಂದು ಇಂದು ಬೆಳಗ್ಗೆ ಶ್ರೀಕೃಷ್ಣ ಭಜನ ಮಂದಿರ ಅಮ್ಟೂರು ಇದರ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ್ದ ಭಾರತೀಯ ಜನತಾ ಪಾರ್ಟಿಯ ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಮಾತನಾಡಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ರಾಜ್ಯಾಧ್ಯಕ್ಷರ ಮಾರ್ಗದರ್ಶನದಂತೆ ಪ್ರತಿಯೊಂದು ಕಾರ್ಯಕರ್ತರು ಪ್ರತಿಯೊಂದು ಬೂತಿನ ಕಟ್ಟಕಡೆಯ ಮನೆಗೆ ಸಂಪರ್ಕ ಮಾಡಿ ಭಾರತೀಯ ಜನತಾ ಪಾರ್ಟಿಯ ಸದಸ್ಯರನ್ನು ನೋಂದಾಯಿಸಿ ಅದಲ್ಲದೇ ಕೇಂದ್ರ ಸರಕಾರದ ಸಾಧನೆಯನ್ನು ಪ್ರತಿ ಮನೆ ಮನೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಂದಿನ ಚುನಾವಣೆಗಳಲ್ಲಿ ಅಭೂತಪೂರ್ವ ಸದಸ್ಯರನ್ನು ಗೆಲ್ಲಿಸುವ ಮೂಲಕ ಹಾಗೆಯೇ ಅಮ್ಟೂರು ಗ್ರಾಮದ ಕಾರ್ಯಕರ್ತರು ಪಕ್ಷವನ್ನು ಬಲಪಡಿಸುವ ಮೂಲಕ ಗ್ರಾಮವನ್ನು ಬಲಪಡಿಸಿ ಇಡೀ ರಾಜ್ಯ ಮಟ್ಟದಲ್ಲಿ ಅಮ್ಟೂರು ಗ್ರಾಮವನ್ನು ನಂಬರನ್ನು ಗ್ರಾಮವಾಗಿ ಪರಿವರ್ತಿಸಬೇಕು ಅದಲ್ಲದೆ ಪ್ರತಿ ಕಾರ್ಯಕರ್ತರು ಮನೆಯಲ್ಲಿ ಗಿಡ ನೆಡುವ ಮೂಲಕ ನಮ್ಮ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿ ಎಂದು ಕರೆ ನೀಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲ ಪೂಜಾರಿ ಗೋಪಾಲಕೃಷ್ಣ ಪೂವಳ ಜಯಂತ ಗೌಡ ಹಾಗೂ ಊರಿನ ಪ್ರಮುಖರಾದ ರಮೇಶ್ ಶೆಟ್ಟಿ ಪೃಥ್ವಿರಾಜ್ ಆಳ್ವಾ ಡಾಕ್ಟರ್ ಶರತ್ ಆಳ್ವಾ ಪುರುಷೋತ್ತಮ್ ಟೈಲರ್ ವೇಣುಗೋಪಾಲ್ ಶೆಟ್ಟಿಗಾರ್ ಶ್ರೀಧರ್ ರಾಯಪ್ಪ ಕೊಡಿ ವಿಖ್ಯಾತ್ ಶೆಟ್ಟಿ ಕೌಶಲ್ ಶೆಟ್ಟಿ ಜಿತೇಶ್ ಶೆಟ್ಟಿ ದಿವಾಕರ ಪೂಜಾರಿ ಕುಶಾಲಪ್ಪ ಶ್ರೀಮನ್ ರಾಧಾಕೃಷ್ಣ ಹರೀಶ್ ಪೂಜಾರಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು





