


ಬಂಟ್ವಾಳ : ಪುರಾಣ ಪ್ರಸಿದ್ಧ ಸಮುದ್ರ ಮಟ್ಟದಿಂದ ಒಂದು ಸಾವಿರ ಅಡಿಗೂ ಎತ್ತರದ ಹಾಸನ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಾಣೆಮಂಗಳೂರು-ಗೋಳ್ತಮಜಲು-ಅಮ್ಟೂರು ಗ್ರಾಮಗಳ ತ್ರಿವೇಣಿ ಸಂಗಮದ ಗಡಿ ಪ್ರದೇಶದ ನಡುವೆ ಕಾಣುವ ಈ ಕಗ್ಗಲ್ಲ ಪರ್ವತಕ್ಕೆ ನಿರ್ಮಿಸಿದ 350 ಮೆಟ್ಟಲುಗಳನ್ನು ಏರಿದಾಗ ಪ್ರಕೃತಿ ಸೌಂದರ್ಯದ ಮಧ್ಯೆ ಸಾಕ್ಷಾತ್ಕಾರವಗುವುದು ಸದಾಶಿವ ಸಾನಿಧ್ಯ.
ನರಹರಿ ದೇವಾಲಯದ ಹಿನ್ನಲೆ : ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರ ಆಗುತ್ತೆ ಎಂಬ ಪ್ರತೀತಿ. ಕುರುಕ್ಷೇತ್ರ ಯುದ್ಧ ಅದ ಮೇಲೆ ಪಾಂಡವರು ಎಲ್ಲಾ ತೀರ್ಥ ಕ್ಷೇತ್ರ ಗಳ ಸಂದರ್ಶಿಸಿ ಬರುವಾಗ ಒಂದು ಇಲ್ಲಿ ತಂದಿದ್ದಾರೆ ಎಂಬ ನಂಬಿಕೆ ಇದೆ. ಇಲ್ಲಿ ಮರುದಿವಸ ಪೂಜೆ ಮಾಡಲು ಶಿವಲಿಂಗ ವನ್ನು ಪ್ರತಿಸ್ಥಾಪನೆ ಮಾಡಿದ್ದಾರೆ.
ಕೃಷ್ಣ ದೇವರು
ಶಿವಲಿಂಗ ವನ್ನು ಅಭಿಷೇಕ ಮಾಡಲು ಈಕ್ಷೇತ್ರದಲ್ಲಿ ಶಂಖ ಚಕ್ರ ಗದಾ ಪದ್ಮ ಎಂಬ ನಾಲ್ಕು ಕೂಪಗಳನ್ನು ಮಾಡಿದ್ದಾರೆ ಎಂದ ಪ್ರತೀತಿ ಇದೆ.
ಅದರಂತೆ ಈಗ ಕೂಡ ಈ ನಾಲ್ಕು ಕೆರಗಳಲ್ಲಿ ಬೇಸಿಗೆ ಕಾಲದಲ್ಲಿ ಯೂ ಕಡಿಮೆ ಯಾಗದೆ ಭಕ್ತರಿಗೆ ಸ್ನಾನ ಮಾಡಲು ಅವಕಾಶ ಇರುತ್ತದೆ.
ತೀರ್ಥ ಸ್ನಾನದಲ್ಲಿ ಭಾಗಿಯಾದರು ಭಕ್ತಾಧಿಗಳು:
ನರಹರಿ ಪರ್ವತದಲ್ಲಿ ಆಟಿ ಅಮಾವಸ್ಯೆಯ ಅಂಗವಾಗಿ ವಿಶೇಷ ತೀರ್ಥಸ್ನಾನ ಹಾಗೂ ನಾಗದೇವರಿಗೆ ವಿಶೇಷ ’ಆಶ್ಲೇಷ ಪೂಜೆಯು ಜರುಗಿತು.
ಸರ್ವರೋಗ ನಿರ್ವಾಕ ಎಂಬ ಅನನ್ಯ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ ’ಸಪ್ತವರ್ಣಿ’ ಪಾಲಸ ಮರದ ರಸವನ್ನು ಸೂರ್ಯೋಧಯದ ಮೊದಲು ಸೇವಿಸುವ ದಿನವಾದ ಆಟಿ (ಅಷಾಡ) ಅಮಾವಾಸ್ಯೆಯಂದು ಪೌರಾಣಿಕ ಹಿನ್ನಲೆಯ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನಗೈದರೆ ಸರ್ವಪಾಪ ನಿವಾರಣೆಗೊಂಡು ಇಷ್ಟಾರ್ಥ ಸಿದ್ದಿಸುವುದು ಎಂಬುದು ನಂಬಿಕೆ. ಆದ್ದರಿಂದ ಪರ್ವತದ ತುತ್ತ ತುದಿಯಲ್ಲಿ ಬಂಡೆಕಲ್ಲಿನ ಮೇಲೆ ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಶಂಖ, ಚಕ್ರ, ಗದಾ, ಪದ್ಮ ಆಕಾರದ ತೀರ್ಥ ರೂಪಗಳಲ್ಲಿ ಅಂದು ಮುಂಜನೆಯೆ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವ ವಧೂವರರು ಮಿಂದು ನಾಗದೇವರಿಗೆ ವಿನಾಯಕ ದೇವರಿಗೆ ಸದಾಶಿವ ದೇವರಿಗೆ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.





