

ಬಂಟ್ವಾಳ : ನರಿಕೊಂಬು ಗ್ರಾಮ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಒಂದಾವರ್ತಿ ಸಂಕಲ್ಪದಂತೆ ಆ.೧ ರಂದು ಬೆಳಗ್ಗೆ ೬ಗಂಟೆಗೆ ದೇವಸ್ಥಾನದ ಗರ್ಭಗುಡಿ ಒಳಾಂಗಣಕ್ಕೆ ಸಾರ್ವಜನಿಕ ಮುಕ್ತ ಪ್ರವೇಶ, ಆಟಿ ಅಮಾವಾಸ್ಯೆ ವಿಶೇಷ ಕಲಶಸ್ನಾನ ದ್ವಿತೀಯ ವರ್ಷದಲ್ಲಿ ನಡೆಯಿತು.
ನೇತ್ರಾವತಿ ನದಿ ತಟ ಸಮುದ್ರ ಮಟ್ಟದಿಂದ ೧೨೦೦ ಅಡಿ ಎತ್ತರದಲ್ಲಿ ಇರುವ ಶಿಖರದ ತುದಿಯಲ್ಲಿ ಇರುವಂತಹ ಶ್ರೀಕ್ಷೇತ್ರದಲ್ಲಿ ದೇವರಿಗೆ ಜಲ, ಸೀಯಾಳ, ಗಂಧ, ಚಂದನ, ತುಪ್ಪದ ಅಭಿಷೇಕವಾಗಿ ಸಂಗ್ರಹಿಸಿದ ಜಲದಿಂದ ಭಕ್ತರಿಗೆ ತೀರ್ಥಸ್ನಾನ ನಡೆಯಿತು.
ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ತೀರ್ಥಸ್ನಾನ ಬಳಿಕ ಔಷಧಯುಕ್ತ ಪಾಲೆದ ಕೆತ್ತೆಯ ಚಿಕ್ಕ ತುಂಡನ್ನು ಸೇವನೆಗೆ ನೀಡಲಾಯಿತು. ಬಳಿಕ ಮೆಂತೆಯ ಅನ್ನವನ್ನು ಪ್ರಸಾದವಾಗಿ ನೀಡಲಾಯಿತು.
ಕ್ಷೇತ್ರದಲ್ಲಿ ಕಳೆದ ವರ್ಷ 2019 ಫೆ.24, 25ರಂದು ಬ್ರಹ್ಮಕಲಶೋತ್ಸವ ನಡೆದಿತ್ತು. ಇದೀಗ ಎರಡನೇ ವರ್ಷದ ಆಟಿ ಆಮಾವಾಸ್ಯೆ ತೀರ್ಥ ಸ್ನಾನ ನಡೆಯುತ್ತಿರುವುದುದಾಗಿದೆ.
ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿದ್ದು ಮಕ್ಕಳು , ಹಿರಿಯರ ಸಹಿತ ಮನೆವಂದಿ ಕ್ಷೇತ್ರಕ್ಕೆ ಆಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
( ಕ್ಷೇತ್ರದ ಪುರೊಹಿತರು ಕಲಶಸ್ನಾನ ನಿರ್ವಹಿಸಿದರು)








