


ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಶಿಶುಮಂದಿರದಲ್ಲಿ ಈ ಶೈಕ್ಷಣಿಕ ವರ್ಷದ ಮೊದಲನೇ ಪಾಲಕರ ಸಭೆ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು.
ಮನೆಯಲ್ಲಿ ಭಜನೆ, ಶ್ಲೋಕಗಳನ್ನು ಹೇಳುವುದು, ದೇವರ ಪೂಜೆ , ತನ್ನ ಕೆಲಸಗಳನ್ನು ತಾನೇ ಮಾಡುವುದು. ಊಟ ಮಾಡುವಾಗ ಒಟ್ಟಿಗೆ ಕೂತು ಪ್ರಾರ್ಥನೆ ಹೇಳಿ ಊಟ ಮಾಡುವುದು. ಅಮ್ಮನ ಕೆಲಸದಲ್ಲಿ ಸಹಾಯ ಮಾಡುವುದು, ಮನೆಯಲ್ಲಿ ಹಿರಿಯರಿಗೆ ನಮಸ್ಕರಿಸುವುದು, ಶ್ಲೋಕಗಳನ್ನು ಮನೆಯವರಿಗೆ ಹೇಳಿಕೊಡುವುದು. ಮನೆಯಲ್ಲಿ ನಿಧಾನವಾಗಿ ಶಾಂತವಾಗಿ ಮಾತನಾಡಲು ಹೇಳುವುದು. ಈ ರೀತಿಯಾಗಿ ಪಾಲಕರು ತಮ್ಮ ಮಕ್ಕಳಲ್ಲಿ ಆದ ಬದಲಾವಣೆಗಳನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇಲ್ಲಿನ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಈ ಸಂದರ್ಭ ಹಂಚಿ ಕೊಂಡರಲ್ಲದೆ ಪಾಲಕರಿಗೆ ಮಾರ್ಗದರ್ಶನ ಮಾಡಿದರು. ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು 93 ಪಾಲಕರು 9 ದಂಪತಿಗಳು ಹಾಗೆಯೇ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪೂಜಾ ಸ್ವಾಗತಿಸಿ, ತ್ರಿವೇಣಿ ವಂದಿಸಿದರು, ಚೈತ್ರ ಕಾರ್ಯಕ್ರಮ ನಿರೂಪಿಸಿದರು.





