

ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸುಪ್ತವಾದ ಮನಸ್ಸಿದ್ದು, ಆ ಮನಸ್ಸಿಗೆ ನಾವು ಯಾವ ವಿಷಯವನ್ನು ನೀಡುತ್ತೇವೆಯೋ ಅದರಂತೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಋಣಾತ್ಮಕ ವಿಷಯಗಳು ಮನಸ್ಸು ಮತ್ತು ವ್ಯಕ್ತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಿದರೆ, ಧನಾತ್ಮಕ ವಿಷಯಗಳು ಧನಾತ್ಮಕ ಪರಿಣಾಮ ಬೀರುತ್ತದೆ ಅವರ ಅಧ್ಯಾಪನ ಸಂಧರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಅವರು ಅನುಭವಿಸಿದ ಅನುಭವಗಳೊಂದಿಗೆ ’ಅನುಭವ ಸವಿಯಲ್ಲ ನೆನಪು ಸಿಹಿ’ ಎಂದು ಉಪನ್ಯಾಸಕರೊಂದಿಗೆ ಮಹೇಶ್ ಕಾಲೇಜಿನ ಉಪನ್ಯಾಸಕಿ ಸುಮತಿ ಗಜಾನನ ಪೈ ಹಂಚಿಕೊಂಡರು.
ಅವರು ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ದಶಮಾನೋತ್ಸವ ಅಂಗವಾಗಿ ಉಪನ್ಯಾಸಕರಿಗೆ ನಡೆದ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್ ಮಾಡುವುದು ಹೇಗೆ ಎಂಬ ಕುರಿತು ಉಪನ್ಯಾಸವನ್ನು ನೀಡುತ್ತಾ ವಿದ್ಯಾರ್ಥಿಯ ಮಾನಸಿಕ ಸ್ಥಿತಿ ಅರಿವಾಗದೆ ಶಿಕ್ಷಣ ನೀಡುವುದು ಕಷ್ಟ ಸಾಧ್ಯ ವಿದ್ಯಾರ್ಥಿಯು ಶಿಕ್ಷಕರಲ್ಲಿ ಮಾತೃಸ್ವರೂಪಿ ಗುಣವನ್ನು ಕಾಣುವಂತಿರಬೇಕು ಎಂದರು.
ಈ ಸಂಧರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ರಾಷ್ಟ್ರಸೇವಿಕಾ ಸಮಿತಿಯ ಹೊಯ್ಸಳ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ ಕಮಲಾ ಪ್ರಭಾಕರ ಭಟ್, ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ, ವಿವಿಧ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸುಕನ್ಯಾ ಸ್ವಾಗತಿಸಿ, ನಿರೂಪಿಸಿ ಇಂಗ್ಲೀಷ್ ಉಪನ್ಯಾಸಕಿ ಶ್ರೀದೇವಿ ವಂದಿಸಿದರು.







