ಬಂಟ್ವಾಳ: ಅರಣ್ಯ ಇಲಾಖೆಯ ಸಮೀಪವೇ ಮರ ಬಿದ್ದು ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ಕಾಲಿಗೆ ಗಾಯಗಳಾಗಿ ಆಸ್ಪತ್ರೆ ಗೆ ದಾಖಲಾದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೋರುಗುಡ್ಡೆ ಎಂಬಲ್ಲಿ ಇಂದು ಸಂಜೆ 4.30 ರ ವೇಳೆ ನಡೆದಿದೆ.


ಕಾಮಾಜೆ ನಿವಾಸಿ ಸೇಸಪ್ಪ ಮೂಲ್ಯ ಅವರ ಮಗಳು ಶಾಲಿನಿ ಮರ ಬಿದ್ದು ಕಾಲಿಗೆ ಗಾಯಗೊಂಡ ವಿದ್ಯಾರ್ಥಿ ನಿ.
ಬಿಸಿರೋಡು ಧರ್ಮಸ್ಥಳ ರಸ್ತೆಯಲ್ಲಿ ಬಿಸಿರೋಡಿನಿಂದ ಒಂದು ಕಿ.ಮೀ ಕ್ರಮಿಸಿದಾಗ ಕಾಮಾಜೆಗೆ ತಿರುಗುವ ಸ್ಥಳ ಬೋರುಗುಡ್ಡೆ ಎಂಬಲ್ಲಿ ನಡೆದುಕೊಂಡು ಹೋಗುವ ವೇಳೆ ಘಟನೆ ನಡೆದಿದೆ.
ಶಾಲಿನಿ ಅವರು ಬಿಸಿರೋಡಿನ ಗೂಡಿನಬಳಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಥಮ ಪಿ.ಯು.ಸಿ.ವಿದ್ಯಾರ್ಥಿ ನಿ.
ಸಂಜೆ ವೇಳೆ ಇವಳು ಮನೆಗೆ ನಡೆದುಕೊಂಡು ಹೋಗುವ ವೇಳೆ ಹಠಾತ್ ಆಗಿ ಮರ ಬಿದ್ದು ಅದರ ರೆಂಬೆ ಇವಳ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅವಳು ಬಿಸಿರೋಡಿನ ಖಾಸಗಿ ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ಧಾಳೆ ಎಂದು ಸ್ಥಳೀಯ ರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಅರ್.ಅವರು ಸ್ಥಳಕ್ಕೆ ಬೇಟಿ ನೀಡಿ ಅಗ್ನಿ ಶಾಮಕ ದಳ ಹಾಗೂ ಪೋಲೀಸರನ್ನು ಕರೆಸಿ ಮರ ತೆರವು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

ಮರ ಬಿದ್ದು ಕಾಮಾಜೆ ಕಡೆಗೆ ತೆರಳಲು ಅಸಾಧ್ಯ ವಾಗಿದ್ದರಿಂದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳವದವರು ಮರ ತೆರವು ಮಾಡಿದ್ದಾರೆ, ಜೊತೆಗೆ ಅಲ್ಲಿ ಬೀಳುವ ಹಂತದಲ್ಲಿ ದ್ದ ಮತ್ತೊಂದು ಮರವನ್ನು ಕೂಡಾ ತೆರವು ಮಾಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ ಚಂದ್ರಶೇಖರ್ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here