ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ವತಿಯಿಂದ ಕಡೇಶಿವಾಲಯ ದಲ್ಲಿ ತರಬೇತಿ ನೀಡುತ್ತಿದ್ದ ಕೈಗಾರಿಕಾ ತರಬೇತಿ ಕೇಂದ್ರವೊಂದು ಪೊದೆಗಳ ಮಧ್ಯದಲ್ಲಿ ಬೂತ್ ಬಂಗಲೆಯಾಗಿದೆ.

ಸ್ಥಗಿತಗೊಂಡ ಕೇಂದ್ರ ಬಿಕ್ಷುಕರ ತಾಣವಾಗಿದೆ, ಗುಜರಿಯವರಿಗೆ ಅವಕಾಶವಾಗಿದೆ, ಕಳ್ಳರಿಗೆ ಹಬ್ಬವಾಗಿದೆ, ಅಕ್ರಮ ಚಟುವಟಿಕೆ ಮಾಡುವವರಿಗೆ ವರದಾನವಾಗಿದೆ.

1989 ರಲ್ಲಿ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂಕಪ್ಪ ರೈ ಅವರ ಅವಧಿಯಲ್ಲಿ ಈ ತರಬೇತಿ ಕೇಂದ್ರ ದ ಉದ್ಘಾಟನೆಯಾಗಿ ತರಬೇತಿ ಯನ್ನು ಅತ್ಯಂತ ಉತ್ತಮವಾಗಿ ನೀಡುತ್ತಿತ್ತು.
ತಾಲೂಕು ಪಂಚಾಯತ್ ಕೈಗಾರಿಕಾ ಇಲಾಖಾ ಯ ಅಧಿಕಾರಿ ಸುಬ್ರಹ್ಮಣ್ಯ ತಂತ್ರಿ ಹಾಗೂ ಸಹಾಯಕ ಬಾಲಕೃಷ್ಣ ರಾವ್ ಅವರ ಮುತುವರ್ಜಿಯಿಂದ ವೇಣೂರು ಮಂಜುನಾಥೇಶ್ವರ ಐಟಿಐ ಯ ಶಿಕ್ಷಕ ಜಾಕೋಬ್ ಮತ್ತು ವಿನ್ಸಿ ಡಿ.ಸೋಜ ಅವರ ತಂಡ ಪ್ರಥಮ ಬ್ಯಾಚ್ ನ ಸುಮಾರು ಮೂವತ್ತು ವಿದ್ಯಾರ್ಥಿ ಗಳಿಗೆ ತರಬೇತಿ ನೀಡುತ್ತಿದ್ದರು.
ಈ ಸಂಸ್ಥೆ ಯಲ್ಲಿ ವಾಹನ ರಿಪೇರಿ, ಜನರಲ್ ಇಂಜಿನಿಯರಿಂಗ್ ಹಾಗೂ ಪಂಪು ರಿಪೇರಿ ಈ ಮೂರು ವಿಭಾಗದಲ್ಲಿ ತರಬೇತಿ ನೀಡಲಾಗುತ್ತಿತ್ತು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ತರಬೇತಿ ಕೇಂದ್ರವನ್ನು ಆರಂಭಿಸಿದರು. ಅದರೆ 5 ಬ್ಯಾಚ್ ಗಳು ಸರಾಗವಾಗಿ ಯಾವುದೇ ವಿಘಗಳಿಲ್ಲದೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.
ಶಾಲೆಯಲ್ಲಿ ಗೋಡೆಯಲ್ಲಿ ಶಿಕ್ಷಕ ರೋರ್ವರು ಭಾವಚಿತ್ರ ವನ್ನು ಹಾಕಿದ್ದಾರೆ ಎಂಬ ವಿವಾದ ಉಂಟಾಗಿ ಸ್ಥಳೀಯ ಹಾಗೂ ತರಬೇತಿ ಕೇಂದ್ರದ ನಡುವೆ ಗಲಾಟೆಗಳು ನಡೆದು ಈ ಕೇಂದ್ರ ಸ್ಥಗಿತಗೊಂಡಿತು ಎಂದು ಇಲ್ಲಿನ ಜನರು ಹೇಳುತ್ತಾರೆ.
ಈ ತರಬೇತಿ ಕೇಂದ್ರ ದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿ ಗಳಿಗೆ ಇಲ್ಲೇ ಉಚಿತವಾಗಿ ಹಾಸ್ಟೆಲ್ ಕೂಡ ನಿರ್ಮಿಸಿದ್ದರು. ಅದು ಕೂಡ ನಿರ್ವಹಣೆ ಇಲ್ಲದೆ ಬಿದ್ದು ಹೋಗಿದೆ.

ಅಕ್ರಮ ಚಟುವಟಿಕೆಯ ತಾಣ:
ಈ ಕೇಂದ್ರ ದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ವಸ್ತುಗಳನ್ನು ವಿದ್ಯಾರ್ಥಿ ಗಳ ತರಬೇತಿ ಗೆ ಎಂದು ಇಡಲಾಗಿತ್ತು.
ಆದರೆ ಯಾವಗಾ ತರಬೇತಿ ಕೇಂದ್ರ ಸ್ಥಗಿತಗೊಂಡಿತೋ ಅವಾಗನಿಂದ ಈವರೆಗೆ ಪ್ರತಿ ಒಂದು ವಸ್ತುಗಳು ಕಳ್ಳ ಕಾಕರ ಪಾಲಾಗಿದೆ.
ಅರಣ್ಯ ಇಲಾಖೆಯವರು ವರ್ಕ್ ಶಾಪ್ ಗೆಂದು ನೀಡಿದ ಜೀಪ್ ಅದು ತುಕ್ಕು ಹಿಡಿದು ಅದರ ಕೆಲ ವಸ್ತುಗಳು ಕಳ್ಳತನ ಮಾಡಲಾಗಿದೆ.
ಬಾಗಿಲುಗಳು ತೆರೆದ ಸ್ಥಿತಿ ಯಲ್ಲಿರುವುದರಿಂದ ಗುಜರಿ ವ್ಯಾಪಾರಿಗಳಿಗೆ ಹಾಗೂ ಬಿಕ್ಷೆ ಬೇಡುವವರಿಗೆ ವಸತಿಯಾಗಿದೆ.
ರಾತ್ರಿ ಹೊತ್ತಿನಲ್ಲಿ ಇಲ್ಲಿ ಅಕ್ರಮ ಚಟುವಟಿಕೆಗಳು ಕೂಡಾ ನಡೆಯುತ್ತಿದೆ ಎಂದು ಸ್ಥಳೀಯ ರು ಹೇಳುತ್ತಾರೆ.
ಈ ತರಬೇತಿ ಕೇಂದ್ರ ವನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಿ ಅಥವಾ ತರಬೇತಿ ಕೇಂದ್ರ ವನ್ನು ಪುನಃಸ್ಥಾಪನೆ ಮಾಡಿ ಎಂದು ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದರು. ಅದರೆ ಜಿಲ್ಲಾ ಪಂಚಾಯತ್ ಮಾತ್ರ ಯಾವುದೇ ಸ್ಪಂದನೆ ನೀಡಿಲ್ಲ ಎಂಬುದು ಇಲ್ಲಿನ ವರ ಆರೋಪ.

ವೀರಪ್ಪ ನಾಯ್ಕ ಗಂಡಿಬಾಗಿಲು:
ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಿಗೆ ಅನುಕೂಲ ವಾಗುವ ಈ ತರಬೇತಿ ಕೇಂದ್ರ ವನ್ನು ಮರುಸ್ಥಾಪನೆ ಮಾಡಬೇಕು ಸರಕಾರ ಈ ನಿಟ್ಟಿನಲ್ಲಿ ಮುತುವರ್ಜಿವಹಿಸಬೇಕು.
ಈ ಕೇಂದ್ರ ಮುಚ್ಚಿ ಸುಮಾರು 20 ವರ್ಷಗಳಾಗಿವೆ, ಇದರ ನಿರ್ವಹಣೆ ಇಲ್ಲದೆ ಕಟ್ಟದ ಸುತ್ತ ಪೊದೆಗಳು ಅವರಿಸಿವೆ. ಸುಮಾರು 1 ಎಕರೆಗಳಿಗಿಂತಲೂ ಅಧಿಕ ಜಮೀನು ಈ ಕೇಂದ್ರ ಕ್ಕೆ ಇದೆ. ಹಾಗಾಗಿ ಸರಕಾರ ಮನಸ್ಸು ಮಾಡಿ ತರಬೇತಿ ಕೇಂದ್ರ ವನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ಈ ತರಬೇತಿ ಕೇಂದ್ರ ದಲ್ಲಿ ಪ್ರಥಮ ಬ್ಯಾಚ್ ನ ಜನರಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಅವರು ಸನ್ ಟೆಕ್ ಸೋಲಾರ್ ಉದ್ಯೋಗ ದಲ್ಲಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here