Tuesday, October 31, 2023

ಪ್ರಾಂತ ಮಟ್ಟದ ಚೆಸ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟ ಉದ್ಘಾಟಣೆ

Must read

ಕಲ್ಲಡ್ಕ: ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾಸಂಸ್ಥಾನ್, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದಚೆಸ್ ಮತ್ತುಟೇಬಲ್ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಕಾರ್‍ಯಕ್ರಮ ಶ್ರೀರಾಮ ಪ್ರೌಢಶಾಲಾ ಮಧುಕರ ಸಭಾಂಗಣದಲ್ಲಿ ನಡೆಯಿತು.
ಹೆತ್ತವರ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಗುರುಗಳ ಆರ್ಶೀವಾದ, ಪ್ರೆರಣೆಯಿಂದ ಬಾಲ್ಯದಲ್ಲಿರಾಜ್ಯ ಮಟ್ಟದಕ್ರೀಡೆಯಲ್ಲಿ ಚಾಂಪ್ಯನ್ ಶಿಪ್ ಪಡೆಯಲು ಹಾಗೂ ಪ್ರಸ್ತುತ ವೈದ್ಯ ವೃತ್ತಿಯನ್ನು ಮುಂದುವರೆಸಲು ಸಾಧ್ಯವಾಯಿತು. ಕ್ರೀಡೆ ಶಾರೀರಿಕದಾಢ್ಯತೆ, ಮನೋಲ್ಲಾಸ ನೀಡುವುದರೊಂದಿಗೆ, ಮನುಷ್ಯನ ಎಲ್ಲಾ ರೋಗಗಳ ವಿಮುಕ್ತಿಗೆ ಉತ್ತಮ ಮಾರ್ಗೋಪಾಯ ನೀಡಿಜೀವನವನ್ನು ಸುಂದರವಾಗಿಸುತ್ತದೆ.ಕ್ರೀಡೆಯಲ್ಲಿ ಒಳಾಂಗಣ ಕ್ರೀಡೆಗ್ರಹಣ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿದರೆ, ಹೊರಾಂಗಣಕ್ರೀಡೆ ಸ್ನಾಯುಶಕ್ತಿ ಹಾಗೂ ದೈಹಿಕದೃಢತೆಯನ್ನು ನೀಡುತ್ತದೆ ಎಂದು ಶ್ರೀರಾಮ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಯಾದ ಕಾಸರಗೋಡು ಜಿಲ್ಲೆ ನೆಲ್ಲಿಕಟ್ಟೆಯ ಆರ್ಯುವೇದ ವೈದ್ಯರಾದ ವಾಣಿಯವರು ಪ್ರಾಂತ ಮಟ್ಟದ ಚೆಸ್ಸ್ ಮತ್ತು ಟೇಬಲ್ ಟೆನ್ನಿಸ್ ಪಂದ್ಯಾಟವನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.


ಇನ್ನೋರ್ವ ಹಿರಿಯ ವಿದ್ಯಾರ್ಥಿಯಾದ ಪೆರಾಜೆ ಮ ಪಂಚಾಯತ್ತಿನ ಪಿ.ಡಿ.ಒ ಶಂಭುಕುಮಾರ್ ಶರ್ಮರವರು ಮಾತನಾಡಿ ಶಾಲೆ ಎಂದರೆ ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲ ಶಿಕ್ಷಣದ ಜೊತೆಗೆ ಭಾರತೀಯತೆಯನ್ನು ನೀಡಿದರೆ ಮಾತ್ರ ಸ್ವಾಸ್ತ್ಯ ಸಮಾಜದ ನಿರ್ಮಾಣ ಆಗಲು ಸಾಧ್ಯ.ಜೀವನ ನಿಭಾಯಿಸಲು, ಸಾಧನೆಯ ಮೆಟ್ಟಿಲೇರಲು ಮಾತೃಭಾಷೆಯಿಂದ ಸಾಧ್ಯ ಹೊರತು ಆಂಗ್ಲಮಾಧ್ಯಮದ ವ್ಯಾಮೋಹದಿಂದಲ್ಲ ಎಂದು ಅನುಭವದ ನುಡಿ ಆಡಿದರು.


ಕ್ರೀಡೆಯಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಪ್ರಪಂಚದಾದ್ಯಂತ ಭಾರತ ದೇಶದ ಕೀರ್ತಿಯನ್ನು ಪಸರಿಸಬೇಕೆಂದು ಶ್ರೀರಾಮ ವಿದ್ಯಾಕೇಂದ್ರದ ಸಹ ಸಂಚಾಲಕರಾದ ರಮೇಶ್‌ ಎನ್‌ರವರು ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಕ್ರೀಡಾಪಟುಗಳಿಗೆ ಶುಭನುಡಿದರು.
ವಿದ್ಯಾಭಾರತೀಯ ಪ್ರಾಂತೀಯ ಶಾರೀರಿಕ ಪ್ರಮುಖರಾದ ಆನಂದ ಶೆಟ್ಟಿಯವರು ಕ್ರೀಡಾಪಟುಗಳಿಗೆ ಶು ಹಾರೈಸಿದರು. ಕಾರ್‍ಯಕ್ರಮದಲ್ಲಿ ನೆಲ್ಲಿಕಟ್ಟೆಯ ಆಯುರ್ವೆದ ವೈದ್ಯರಾದ ವೆಂಕಟಗಿರೀಶ್, ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್‌ ಕಾಯರ್‌ಕಟ್ಟೆ, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿಕುಮಾರಿ, ಶ್ರೀರಾಮ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ರವಿರಾಜ್‌ ಕಣಂತೂರು, ಕ್ರೀಡಾವ್ಯವಸ್ಥಾಪಕರು ,ತರಬೇತುದಾರರು, ತೀರ್ಪುಗಾರರು, ಕ್ರೀಡಾಪಟುಗಳು, ಶ್ರೀರಾಮ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್‍ಯಕ್ರಮವನ್ನು ಜಿನ್ನಪ್ಪ ಏಳ್ತಿಮಾರ್ ನಿರೂಪಿಸಿ, ಮನೋಜ್ ಸ್ವಾಗತಿಸಿ ಪ್ರಶಾಂತ್ ವಂದಿಸಿದರು

More articles

Latest article