



ವಿಟ್ಲ: ಅನಿಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ -ಶಿಕ್ಷಕ ಸಭೆಯು ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷ ವಸಂತ ಸೊರಂಗದಮೂಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಪುತ್ತೂರಿನ ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯವರು ಉದಾರವಾಗಿ ನೀಡಿದ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು
ಮುಖ್ಯ ಅತಿಥಿ ಗಳಾಗಿ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಅಬೂಬಕರ್ ಅನಿಲಕಟ್ಟೆ, ಶಿಕ್ಷಣ ತಜ್ಞ ಈಶ್ವರ ಭಟ್ ಪೂರ್ಲಪ್ಪಾಡಿ,ಗಂಗಾಧರ ಗೌಡ ಪೂರ್ಲಪ್ಪಾಡಿ,ಶಾಲಾ ಉಪಾಧ್ಯಕ್ಷೆ ಶಾಲಿನಿ ಪೂರ್ಲಪ್ಪಾಡಿ, ಭಾಗೀರಥಿ ವಿಶ್ವನಾಥ ಗೌಡ,ಹೇಮಾವತಿ ಅನಿಲಕಟ್ಟೆ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು.ಅನುಷಾ ವಂದಿಸಿದರು.





