ವಿಟ್ಲ: ಧನಸಂಪತ್ತಿನಿಂದ ಕ್ಷಣಿಕ ಸುಖ ಸಿಗಬಹುದು. ಅಮೃತತ್ವ ಬರಲಾರದು. ಧನಸಂಪತ್ತಿನ ಒಲವನ್ನು ತ್ಯಜಿಸಿ, ಅಧ್ಯಾತ್ಮಿಕ ಸಂಪತ್ತಿನ ಒಲವು ಹೆಚ್ಚಿಸಬೇಕು. ಸಂಸ್ಕೃತ ಭಾಷೆ ಶರೀರವೆಂದು ಪರಿಗಣಿಸಿದರೆ ಸಂಸ್ಕೃತಿ ಆತ್ಮವಾಗಿದೆ. ಆತ್ಮ ಮತ್ತು ಶರೀರವೆರಡೂ ಇದ್ದರೆ ಮಾತ್ರ ವ್ಯಕ್ತಿ ಜೀವಂತ. ಆದುದರಿಂದ ಲೌಕಿಕ ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಶಿಕ್ಷಣವೂ ಮುಖ್ಯ. ಧರ್ಮ, ಸಂಸ್ಕೃತಿಯನ್ನು ನಾಶ ಮಾಡುವ ಶಿಕ್ಷಣ ಬೇಡ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.
ಅವರು ಬುಧವಾರ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಮೂರುಕಜೆ ಅಜೇಯ ಟ್ರಸ್ಟ್ ನಡೆಸುತ್ತಿರುವ ಮೈತ್ರೇಯಿ ಗುರುಕುಲದ ನೂತನ ವಸತಿ ಸಮುಚ್ಚಯ ಕೃಷ್ಣಸ್ಮೃತಿಯ ಪ್ರವೇಶೋತ್ಸವ ನೆರವೇರಿಸಿ, ಆಶೀರ್ವಚನ ನೀಡಿದರು.


ಆರೆಸ್ಸೆಸ್ ದಕ್ಷಿಣ ಮಧ್ಯಕ್ಷೇತ್ರೀಯ ಸಹ ಕ್ಷೇತ್ರ ಪ್ರಚಾರಕ ಸುಽರ್ ಅವರು ಮಾತನಾಡಿ, ಶಿಕ್ಷಣ ಮಾರಾಟದ ವಸ್ತುವಾಗಿದೆ. ಬದಲಾವಣೆ ಮಾಡಬೇಕೆಂದರೂ ಆಗಲಿಲ್ಲ. ಸಂಘದ ನೇತೃತ್ವದಲ್ಲಿ ಆರಂಭವಾಗಿರುವುದು ವಿಶೇಷ ಸಾಧನೆ. ಕಾಲನ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದ್ದು, ಪ್ರವಾಹದ ವಿರುದ್ಧ ಈಜಿ ಯಶಸ್ವಿಯಾದಂತಾಗಿದೆ. ವಿದ್ಯಾರ್ಥಿಗಳಲ್ಲಿ ಪರಿವರ್ತನೆ ಸಾಧಿಸಿ, ತೋರಿಸಲಾಗಿದೆ ಎಂದರು.
ದೆಹಲಿ ಐಆರ್‌ಎಡಿಎ ಸ್ವತಂತ್ರ ನಿರ್ದೇಶಕ ಮಧುಶ್ರೀ ಎಂ.ಸ್ವಾಮಿ ಶುಭಾಶಂಸನೆಗೈದರು. ಆರೆಸ್ಸೆಸ್ ಮುಖ್ಯಸ್ಥರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್, ನಿಟ್ಟೆ ವಿನಯ ಹೆಗ್ಡೆ, ಸೀತಾರಾಮ ಕೆದಿಲಾಯ, ಡಾ.ರಾಮಚಂದ್ರ ಭಟ್ ಕೋಟೆಮನೆ, ಎಸ್.ಆರ್.ರಂಗಮೂರ್ತಿ, ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ದಾನಿಗಳನ್ನು ಸಮ್ಮಾನಿಸಲಾಯಿತು.
ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಸ್ತಾವಿಸಿ, ಸ್ವಾಗತಿಸಿದರು. ಅಜೇಯ ಟ್ರಸ್ಟ್ ಸದಸ್ಯ ಎ.ಎಸ್.ಭಟ್ ದಾನಿಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಜ್ಯೋತಿ ನಿರೂಪಿಸಿದರು. ಅಜೇಯ ಟ್ರಸ್ಟ್ ಸದಸ್ಯ ರವೀಂದ್ರ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here