



ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ಮಂಗಳೂರು- ಬೆಂಗಳೂರು ರಸ್ತೆಯಲ್ಲಿ ಬಿ.ಸಿ.ರೋಡಿನಿಂದ ಉಪ್ಪಿನಂಗಡಿವರಗೂ ಹೊಂಡಗುಂಡಿಗಳದ್ದೇ ಕಾರುಬಾರು.
ಬಿ.ಸಿ.ರೋಡು ಹೃದಯಭಾಗದಿಂದ ಉಪ್ಪಿನಂಗಡಿವರೆಗೂ ರಸ್ತೆಯಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲ. ಅಪಘಾತಕ್ಕೆ ಅಹ್ವಾನ ನೀಡುವ ಬಾಯ್ತರೆದುನಿಂತಿರುವ ಹೊಂಡಗಳು.
ಮಳೆ ಆರಂಭವಾಯಿತೆಂದರೆ ಸಾಕು ಹೆದ್ದಾರಿ ತುಂಬಾ ಗುಂಡಿಗಳು ಬೀಳುತ್ತವೆ. ಕಳಪೆ ಗುಣಮಟ್ಟದ ಡಾಮರೀಕರಣ ಮಾಡುವುದರಿಂದಲೇ ಪ್ರತಿ ವರ್ಷವೂ ಹೆದ್ದಾರಿಯಲ್ಲಿ ಹೊಂಡಗಳು ಬೀಳುತ್ತವೆ ಎಂದು ಹೇಳಲಾಗುತ್ತದೆ.
ಚತುಷ್ಪತ ಕಾಮಗಾರಿ ನೆಪ:
ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯನ್ನು ರಿಪೇರಿ ಮಾಡುವುದು ಅಗಲಿ ಅಥವಾ ರಸ್ತೆಗೆ ಡಾಮರೀಕರಣ ಮಾಡುವ ಕೆಲಸವಾಗಲಿ ಮಾಡಲೇ ಇಲ್ಲ.
ಕಾರಣ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪತ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ಕಾಮಗಾರಿ ಕೂಡಾ ಆರಂಭವಾಗಿತ್ತು.
ಆದರೆ ಕಳೆದ ವರ್ಷ ರಸ್ತೆಯ ಕಾಮಗಾರಿ ಏನೋ ಆರಂಭವಾಗಿತ್ತು ಅಗಲೀಕರಣ ಕೂಡಾ ಕೆಲವು ಕಡೆಗಳಲ್ಲಿ ಮಾಡಲಾಗಿದೆ.
ಕೊನೆಯ ಕ್ಷಣದಲ್ಲಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಎಲ್.ಎಂಡ್.ಟಿ.ಕಂಪನಿ ಯಾವುದೋ ತಾಂತ್ರಿಕ ಕಾರಣಗಳಿಂದ ಹಿಂದೆ ಸರಿದಿದೆ.
ಕಾಮಗಾರಿ ಅರ್ಧದಲ್ಲಿ ನಿಂತಿದೆ. ಅಗೆದು ಹಾಕಲಾದ ರಸ್ತೆಗಳು ಅರ್ಧಕ್ಕೆ ನಿಂತಿದೆ. ನೀರು ಎಲ್ಲಾ ರಸ್ತೆಯ ಮೇಲೆ ಹರಿದುಹೋಗುತ್ತಿದೆ. ರಸ್ತೆಯೆಲ್ಲಾ ಹಾಳಾಗಿವೆ.
ಡ್ಯಾನ್ಸ್ ಮಾಡುತ್ತಾ ಸಾಗುತ್ತಿವೆ ವಾಹನ:
ಬಿ.ಸಿ.ರೋಡಿನಿಂದ ಮೆಲ್ಕಾರ್ ವರೆಗೂ ರಸ್ತೆಯಲ್ಲಿ ಗುಂಡಿ ಇಲ್ಲದ ಜಾಗವಿಲ್ಲ. ವಾಹನ ಸವಾರರಂತೂ ಸಂಚಾರ ಮಾಡಲು ಸಾಧ್ಯವಿಲ್ಲದೆ ಡ್ಯಾನ್ಸ್ ಮಾಡುತ್ತಾ ಬ್ಯಾಲೆನ್ಸ್ ಮಾಡುವುದನ್ನು ನಿಂತು ನೋಡುವುದೇ ಒಂದು ಖುಷಿ.
ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುವ ಪಾದಾಚಾರಿಗಳ ಮೇಲೆ ಎರಚುವ ನೀರು, ಬಟ್ಟೆ ಬರೆಯಲ್ಲಾ ಕೆಸರಿನಿಂದ ಕೂಡಿದಾಗ ಅವರ ಬಾಯಿಂದ ಬರುವ ಕೆಟ್ಟ ಶಬ್ದಗಳು , ಗುಂಡಿಗೆ ಬಿದ್ದ ವಾಹನ ಮೇಲೆ ಬರಲು ಅಗದೆ ನರಕಯಾತನೆ ಅನುಭವ, ಗುಂಡಿಗೆಂದು ವಾಹನವನ್ನು ಜಾಗೂರುಕತೆಯಿಂದ ಚಾಲನೆ ಮಾಡುವಾಗ ಸಂಚಾರಕ್ಕೆ ಅಡಚಣೆ, ಅ ಸಂದರ್ಭದಲ್ಲಿ ಅವಸರವಿರುವ ವಾಹನ ಸವಾರರ ಕರ್ಕಶ ಹಾರ್ನ್ ಎಲ್ಲವೂ ಒಂದು ತರಹ ಆಗುತ್ತದೆ. ಇನ್ನೂ ನಾವು ಎಲ್ಲಿ ಇದ್ದೇವೆ ಅಂತ ಭಾವನೆ ಕೂಡಾ ಬರುತ್ತದೆ.
ಅಭಿವೃದ್ಧಿಯ ಮಂತ್ರಗಳನ್ನು ಹಾಡುವ ಜನಪ್ರತಿನಿಧಿಗಳು ಎಲ್ಲಿ ಹೋಗಿದ್ದಾರೆ ಎಂಬ ಭಾವನೆ ಕೂಡ ಬರುತ್ತದೆ.
ಹೊಂಡ ಗುಂಡಿಗೆ ಬಿದ್ದು ಗಾಯಗೊಂಡವರೆಷ್ಟು:
ಹೆಲ್ಮೆಟ್ ಇಲ್ಲದೆ ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುವ ಸಂಖ್ಯೆಗಿಂತ ಅಧಿಕವಾಗಿ ಮಳೆಗಾಲದಲ್ಲಿ ಮರಣಗುಂಡಿಗೆ ಬಿದ್ದು ಕೈಕಾಲು ಕಳೆದು ಕೊಂಡವರು ಇರಬಹುದು.
ರಾತ್ರಿ ಹೊತ್ತಲ್ಲಿ ಅಪರೂಪವಾಗಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚಾರ ಮಾಡಿದರೆ ಅವರಿಗೆ ಒಂದು ಗತಿ ಗ್ಯಾರಂಟಿ.
ಹಗಲು ನೋಡಿದ ಗುಂಡಿಗೆ ರಾತ್ರಿ ಬಿದ್ದ ಅನ್ನುವ ಗಾದೆಯಂತೆ ಈ ರಸ್ತೆಯಲ್ಲಿ ಸಂಚರಿಸುವವರ ಪಾಡಾಗಿದೆ.
ದಿನವೊಂದಕ್ಕೆ ಸಾವಿರಾರು ರೂ ದಂಡ ವಸೂಲಿ ಮಾಡುವ ಪೋಲೀಸರು ಮಾತ್ರ ಪ್ರತಿನಿತ್ಯವೂ ಮೇಲಾಧಿಕಾರಿಗಳ ಅದೇಶಕ್ಕೆ ಕಟ್ಟುಬಿದ್ದು ಅದೇಶ ಪಾಲನೆ ಮಾಡುತ್ತಾರೆ.
ರಸ್ತೆಯಲ್ಲಿ ಇಂತಹ ಗುಂಡಿಗಳಿವೆ ಸಾರ್ ಎಂದು ಇದರ ಮಾಹಿತಿ ನೀಡುವ ಕೆಲಸ ಅವರು ಮಾಡುವುದಿಲ್ಲ ಅಗಿರಬೇಕು.
ದಿನವೊಂದಕ್ಕೆ ಸಾವಿರಾರು ರೂ ದಂಡ ವಸೂಲಿ ಮಾಡಿ ಟ್ರಾಫಿಕ್ ಪೋಲೀಸರು ಸರಕಾರಕ್ಕೆ ನೀಡುತ್ತಾರೆ. ಅದರೆ ಅ ಹಣದಲ್ಲಿ ಕನಿಷ್ಟ ಇಲ್ಲಿನ ರಸ್ತೆ ರಿಪೇರಿ ಮಾಡಲು ಜಿಲ್ಲಾ ಆಡಳಿತ ಮನಸ್ಸು ಮಾಡಿಲ್ಲ ಎಂಬುದು ಸಾರ್ವಜನಿಕ ರ ಆರೋಪ.
ಜನರಿಗೆ ಮೂಲಭೂತ ಸೌಕರ್ಯಗಳ ನ್ನು ನೀಡಿದ ಮೇಲೆ ನಿಯಮಗಳನ್ನು ಜಾರಿಗೆ ತರಲಿ, ಪಾಲನೆ ಕೂಡಾ ಅಗಲಿ ಬೇಕು.
ಆದರೆ ಇಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳ ನೀಡುವ ಜನಪ್ರತಿನಿಧಿಗಳು ಜವಬ್ದಾರಿ ಯಿಂದ ನುಣುಚಿಕೊಳ್ಳುತ್ತಾರೆ ಎಂದು ಸಾರ್ವಜನಿಕ ರು ಜನಪ್ರತಿನಿಧಿಗಳ ಮೇಲೆ ಆರೋಪ ವ್ಯಕ್ತ ಪಡಿಸಿದ್ದಾರೆ.





