

ಬಂಟ್ವಾಳ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ನೇತ್ರಾವತಿ ನದಿಯ ನೀರಿನ ಏರಿಕೆ ಯಾಗಿದೆ.
ಸಂಜೆಯ ವೇಳೆ ಗೆ ನೇತ್ರಾವತಿ ನೀರಿನ ಮಟ್ಟ 5.1 ಮೀ ಮುಟ್ಟಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 5.6 ಮೀ ಗೆ ಏರಿಕೆಯಾಗಿತ್ತು.
ಬೆಳಿಗ್ಗೆ ಯಿಂದ ಕೊಂಚ ಮಳೆ ಕಡಿಮೆಯಾಗಿದ್ದರಿಂದ ನೀರಿನ ಮಟ್ಟ ಇಳಿಕೆಯಾಗಿದೆ. ಕಳೆದ ಬಾರಿ ಈ ಸಮಯದಲ್ಲಿ ಎರಡು ಬಾರಿ ನೆರೆ ಬಂದಿತ್ತು. ನೇತ್ರಾವತಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಕೂಡ ತಲುಪಿತ್ತು. ಆದರೆ ಈ ಬಾರಿ ಮಳೆ ಕಡಿಮೆ ಯಾಗಿದ್ದರಿಂದ ನೇತ್ರಾವತಿ ನದಿ ಸರಿಯಾಗಿ ತುಂಬಿಲ್ಲ.
ಅಲ್ಲಲ್ಲಿ ಮರಳು ದಿಬ್ಬಗಳು ಕಾಣುತ್ತಿದ್ದು ಕರಾವಳಿಯ ಜನರು ನೀರಿನ ಅಭಾವ ತಲೆದೋರುತ್ತದೆ ಎಂಬ ಹೆದರಿಕೆಯಲ್ಲಿದ್ದರು.
ಆದರೆ ಕಳೆದ ಎರಡು ದಿನಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನತೆ ಕೊಂಚ ರಿಲೀಫ್ ಅಗಿದ್ದಾರೆ.
ರೈತರು ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಲು ಮಳೆ ಅನುಕೂಲವಾಗಿದೆ.







