


ಬಂಟ್ವಾಳ: ಎಸ್ಕೆಎಸೆಸೆಫ್ ವಿಖಾಯದ ದ.ಕ. ಜಿಲ್ಲಾ ಸಮಿತಿಯ ವಿಖಾಯ ತರಬೇತಿ ಶಿಬಿರವು ರವಿವಾರ ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.
ಎಸ್ಕೆಎಸೆಸೆಫ್ ವಿಖಾಯ ಜಿಲ್ಲಾ ಜನರಲ್ ಕನ್ವೀನರ್ ಮುಸ್ತಫಾ ಕಾಂದ್ರೋಡಿ ಕಟ್ಟದಪಡ್ಪು ಅಧ್ಯಕ್ಷತೆ ವಹಿಸಿದ್ದರು. ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ಕಾರ್ಯಕ್ರಮ ಉದ್ಘಾಟಿಸಿ ವಿಖಾಯ ಸದಸ್ಯರಿಗೆ ತರಬೇತಿ ನೀಡಿದರು. ವಕೀಲ ಜಲೀಲ್ ನಂದಾವರ ಅವರು ಕಾನೂನು ಮತ್ತು ಟ್ರಾಫಿಕ್, ಸಪ್ವಾನ್ ಪೈಝಿ ಅವರು ಮೆಡಿಟೇಷನ್ ಹಾಗೂ ಎಸ್ಕೆಎಸೆಸೆಫ್ ವಿಖಾಯ ಕೇಂದ್ರ ಸಮಿತಿಯ ಜನರಲ್ ಕನ್ವೀನರ್ ಸಲ್ಮಾನ್ ಪೈಝಿ ಸಂಘಟನೆ, ವಿಖಾಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ಶರಬಿಲ್ ಅವರು ಪ್ರಥಮ ಚಿಕಿತ್ಸಾ ವಿಷಯದ ಕುರಿತು ತರಬೇತಿ ನೀಡಿದರು.
ಎಸ್ಕೆಎಸೆಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾಧ್ಯಕ್ಷರಾದ ಖಾಸಿಂ ದಾರಿಮಿ, ಜಿಲ್ಲಾ ಉಸ್ತುವಾರಿ ಶರೀಫ್ ಕಕ್ಕಿಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ವಲಯಧ್ಯಕ್ಷ ಇರ್ಷಾದ್ ದಾರಿಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಜಿಲ್ಲಾ ವಿಖಾಯ ಕೋಶಾಧಿಕಾರಿ ಹಸೈನಾರ್ ಉರುಮಣೆ, ವರ್ಕಿಂಗ್ ಕನ್ವೀನರ್ ಶಾಕೀರ್ ಮಳಲಿ, ಸಂಘಟನಾ ಕಾರ್ಯದರ್ಶಿ ಮನ್ಸೂರ್ ಮೌಲವಿ ಅಮ್ಚಿನಡ್ಕ, ಬಂಟ್ವಾಳ ವಲಯ ಪ್ರಧಾನ ಕಾರ್ಯದರ್ಶಿ ಹನೀಫ್ ಮುಸ್ಲಿಯಾರ್, ಉಪಾಧ್ಯಕ್ಷ ಅಲ್ತಾಫ್, ವಲಯ ವಿಖಾಯ ಕನ್ವೀನರ್ ಅಬ್ದುಲ್ ರಹಿಮಾನ್ ಕೊಡಂಗೆ, ಅಕ್ಬರ್ ಅಲಿ ಅಡ್ಡೂರು, ಸೈಬರ್ವಿಂಗ್ ರಾಜ್ಯಾಧ್ಯಕ್ಷ ಸಫ್ವಾನ್ ಬಂಟ್ವಾಳ, ವಿಖಾಯ ಆಕ್ಟೀವ್ ವಿಂಗ್ ಸದಸ್ಯ ಶಾಕೀರ್ ಶಾಂತಿಅಂಗಡಿ, ನಾಸಿರ್ ಶಾಂತಿಅಂಗಡಿ, ಬಿ.ಸಿ.ರೋಡ್ ಕ್ಲಸ್ಟರ್ ವಿಖಾಯ ಕನ್ವೀನರ್ ರಹಿಮಾನ್ ಭಾಗವಹಿಸಿದ್ದರು. ಎಸ್ಕೆಎಸೆಸೆಫ್ ವಿಖಾಯ ಕೇಂದ್ರ ಸಮಿತಿಯ ಸದಸ್ಯ ಅಬ್ದುಲ್ ಬಶೀರ್ ಮಜಲು ಸ್ವಾಗತಿಸಿದರು.





