ಬಂಟ್ವಾಳ : ಡೆಂಗ್ಯು ಜ್ವರಕ್ಕೆ ಮಂಗಳೂರಿನ ಟಿ.ವಿ.ವೊಂದರ ಕ್ಯಾಮರಾ ಮ್ಯಾನ್ ಬಲಿಯಾಗಿದ್ದಾರೆ.

ಮಂಗಳೂರು ಜಿಲ್ಲಾ ವ್ಯಾಪ್ತಿಯ ಬಿಟಿವಿ ಕ್ಯಾಮರಾಮ್ಯಾನ್ ನಾಗೇಶ್ ಪಡು (34) ಅವರು ಹಲವು ದಿನಗಳಿಂದ ಮಹಾಮಾರಿ ಡೆಂಗ್ಯು ಜ್ವರದಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯರಾತ್ರಿ ವೇಳೆ ಡೆಂಗ್ಯುಗೆ ಬಲಿಯಾಗಿದ್ದಾರೆ

ನಾಗೇಶ್ ಅವರು ನೀರುಮಾರ್ಗ ಸಮೀಪದ ಪಡು ಎಂಬಲ್ಲಿ ನ ನಿವಾಸಿ.
ಸ್ಥಳೀಯ ವಾಗಿಯೂ ಸಾಮಾಜಿಕ ಧಾರ್ಮಿಕ ಹಾಗೂ ಸಂಘಸಂಸ್ಥೆಗಳ ಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.

ಉತ್ತಮ‌ ಆಟಗಾರ, ಪತ್ರಕರ್ತರ ಬಳಗದಲ್ಲಿ ಬಹಳಷ್ಟು ಮಿತ್ರರನ್ನು ಹೊಂದಿದ್ದರು.
ಮೃತ ನಾಗೇಶ್ ಪುಟ್ಟ ಮಗು ಪತ್ನಿ ತಂದೆ ತಾಯಿ ಸಹೋದರ ಸಹೋದರಿ ಯರು ಸಹಿತ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.
ನಾಗೇಶ್ ಪಡು ಅವರ ನಿಧನ ಕ್ಕೆ ಜಿಲ್ಲಾ ಪತ್ರಕರ್ತರ ಸಂಘ ಸಂತಾಪ ವ್ಯಕ್ತಡಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here