


ಬಂಟ್ವಾಳ: ಮೋಸ ,ಮೋಸ, ಮೋಸ ತುಪ್ಪ ದಲ್ಲೂ ಮೋಸ… ಇಂತಹ ಮೋಸ ನಿಮಗೂ ಆಗಿರಬಹುದು.
ತುಪ್ಪ ಬೇಕಾ ತುಪ್ಪ ಬೇಕಾ ಅಂತ ನಿಮ್ಮ ಊರಿಗೂ ಮನೆಗೂ ಇಂತವರು ಬಂದಿರಬಹುದು ಆದರೆ ಇನ್ನು ಮುಂದೆಯಾದರೂ ಎಚ್ಚರ ಎಚ್ಚರ ಎಚ್ಚರ.
ಇದು ದನದ ತುಪ್ಪವಲ್ಲ! ಕೇವಲ ತುಪ್ಪದ ಬಣ್ಣವನ್ನು ಹೋಲುವ ನಕಲಿ ತುಪ್ಪವಾಗಿದೆ. ಇಂತಹ ಘಟನೆ ನಡೆದಿದ್ದು ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿ ಜೋಗಿಬೆಟ್ಟು ಎಂಬಲ್ಲಿ ಬೆಳಿಗ್ಗೆ ಮನೆ ಮನೆಗೆ ತುಪ್ಪ ಮಾರಾಟ ಮಾಡುವ ವ್ಯಕ್ತಿಯೋರ್ವ ಅಗಮಿಸಿದ್ದ.
ಅರ್ಧ ಲೀಟರ್ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಪ್ಪ ಎಂದು ಹೇಳಿ ಮಾರಾಟ ಮಾಡಲು ಬಂದಿದ್ದ.
ಈತನ ಅರ್ಧ ಲೀಟರ್ ಬಾಟಲಿಯ ತುಪ್ಪದ ರೇಟ್ ಎಷ್ಟು ಗೊತ್ತಾ 250 ರೂಪಾಯಿ. ಅದರೆ ಚರ್ಚೆ ಮಾಡಿದ ಬಳಿಕ ಈತ ಒಂದು ಬಾಟಲ್ 100 ರೂಪಾಯಿಗೆ ನೀಡುತ್ತಾನೆ.
ಅದರೆ ಒಂದು ಕುಡ್ತೆ ಶುದ್ಧ ತುಪ್ಪದ ನಿಜವಾದ ಬೆಲೆ 100 ರೂಪಾಯಿ ಇದೆ. ಆದರೆ ಈತ ಅರ್ಧ ಲೀಟರ್ ತುಪ್ಪ 100 ರೂಪಾಯಿ ಗೆ ಹೇಗೆ ನೀಡುತ್ತಾನೆ ಎಂದು ಸಂಶಯ ಬಂದು, ಜೋಗಿಬೆಟ್ಟುವಿನ ಯುವಕರು ಈತನ ಕೈಯಿಂದ ತುಪ್ಪವನ್ನು ಪಡೆದುಕೊಂಡು ಪರೀಕ್ಷೆ ನಡೆಸಿದರು.
ಆವಾಗ ಗೊತ್ತಾಯಿತು ಇದು ತುಪ್ಪವಲ್ಲ, ಇದು ಡಾಲ್ಡಕ್ಕೆ ಯಾವುದೋ ಕೆಮಿಕಲ್ ಬಳಸಿ ಕಳಪೆ ಗುಣಮಟ್ಟದಲ್ಲಿ ತುಪ್ಪ ಎಂಬ ಹೆಸರಿನ ಮೇಲೆ ಇವರು ಊರಿನಿಂದ ಊರಿಗೆ ಅಳೆದು ಜನರನ್ನು ತುಪ್ಪದ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ. ಇಂತಹ ದೊಡ್ಡ ಜಾಲವೇ ಇದೆ.
ಇಂದು ಸಾರ್ವಜನಿಕರ ಕೈಗೆ ಸಿಕ್ಕಿದ ಈತ ಬಳ್ಳಾರಿ ಮೂಲದ ಮಣಿಕಂಠ ಎಂದು ಹೇಳಿಕೊಂಡಿದ್ದಾನೆ. ಈತನ ಜೊತೆಗೆ ಇನ್ನೊಬ್ಬ ವ್ಯಕ್ತಿ ಬಂದಿದ್ದ ಆತ ಕಡೇಶಿವಾಲಯದ ಕಡೆಗೆ ಹೊಗಿದ್ದ. ಆದರೆ ತುಪ್ಪದ ಹೆಸರಿನಲ್ಲಿ ಜನರು ಮೋಸ ಮಾಡಿ ನಂಬಿಸುತ್ತಿದ್ದ ಮಣಿಕಂಠನನ್ನು ಜೋಗಿಬೆಟ್ಟುವಿನ ಸಾರ್ವಜನಿಕರು ಹಿಡಿದು ವಿಟ್ಲ ಪೋಲೀಸರ ಕೈಗೆ ನೀಡಿದ್ದಾರೆ. ವಿಟ್ಲ ಪೋಲೀಸರು ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಜೋಕೆ ಇದೇ ರೀತಿಯಲ್ಲಿ ಬೇರೆ ಬೇರೆ ವಸ್ತುಗಳನ್ನು ಮಾರಾಟ ಮಾಡಲು ಮನೆಬಾಗಿಲಿಗೆ ಬರುವ ವ್ಯಕ್ತಿಗಳ ಬಗ್ಗೆ ಜಾಗರೂಕತೆಯಿಂದ ಇರಬೇಕಾಗಿದೆ.







