


ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ಅವರಿಗೆ ತಮಿಳುನಾಡಿನ ತಿರುಚಿನಾಪಲ್ಲಿ ಭಾರತೀದಾಸನ್ ವಿಶ್ವವಿದ್ಯಾಲಯವು ಇವರು ಮಂಡಿಸಿದ ‘ಮ್ಯಾಪಿಂಗ್ ಅಫ್ ರೀಸೆರ್ಚ್ ಪ್ರೊಡ್ಯೂಕ್ಟಿವಿಟಿ ಇನ್ ಗ್ರೀನ್ ಏಕನೊಮಿಕ್ಸ್: ಎ ಬಿಬಿಲಿಯೊಮೆಟ್ರಿಕ್ ಸ್ಟಡಿ’ ಪ್ರಬಂದಕ್ಕೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಸೈಂಟ್ ಜೋಸೆಫ್ ಕಾಲೇಜಿನ ಗ್ರಂಥಪಾಲಕ ಎಮ್.ದೊರೈರಾಜನ್ ಮಾರ್ಗದರ್ಶನ ನೀಡಿದ್ದರು.
ಇವರು ಮೂಲತಃ ಚಿಕ್ಕಬಳ್ಲಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ನಾಗಮಂಗಲ ಗ್ರಾಮದವರಾಗಿರುವ ಇವರು 2005 ರಿಂದ 2010 ವರೆಗೆ ಚಿಕ್ಕಬಳ್ಳಾಪುರ ಪದವಿ ಪೂರ್ವ ಕಾಲೆಜು ನಲ್ಲಿ ಗ್ರಂಥಪಾಲಕರಾಗಿದ್ದು, ಪ್ರಸ್ತುತ 2010 ರಿಂದ ಸಿದ್ದಕಟ್ಟೆ ಕಾಲೆಜು ನಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತೀದ್ದಾರೆ.
ಪಿ.ಎಚ್.ಡಿ.ಪದವಿ ಪಡೆದ ಇವರನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ; ಸತ್ಯನಾರಾಯಣ ಭಟ್ , ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು,ಕಾಲೇಜು ಅಬಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸಂದೇಶ ಶೆಟ್ಟಿ ಸಹಿತ ಕಾಲೇಜು ಪ್ರಾದ್ಯಾಪಕರು,ಭೋದಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.





