ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಬ್ರಹ್ಮರಕೋಟ್ಲು ಎಂಬಲ್ಲಿ ಟ್ಯಾಂಕರ್ ಮತ್ತು ಕಾರು ನಡುವೆ ನಡೆದ ಬೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿ ಮೃತಪಟ್ಟು ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದರೆ ಉಳಿದ ಐದು ಮಂದಿ ಗಂಭೀರ ಪ್ರಮಾಣದ ಗಾಯಗಳಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ಬಹ್ಮರಕೋಟ್ಲು ಟೋಲ್ ಗೇಟ್ ಬಳಿಯ ಬ್ರಹ್ಮ ಸನ್ನಿಧಿಯ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯದೆ ಬಾಕಿ ಇರುವ ಏಕಮುಖ ರಸ್ತೆಯಲ್ಲಿ ಗ್ಯಾಸ್ ಟ್ಯಾಂಕ್ ಹಾಗೂ ತವೆರಾ ಕಾರು ಮಧ್ಯೆ ನಡೆದ ಬೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಮೃತರಾದವರು ಎಲ್ಲರೂ ಒಂದೇ ಕುಟುಂಬದ ವರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗಾಂದಿನಗರ ನಿವಾಸಿಗಳಾದ ಗೋವಿಂದ (65). ಅವರ ಪತ್ನಿ ಪದ್ಮಾವತಿ (45). ಅವರ ಮಗ ನಾಗಾರಾಜ್ (22) ಹಾಗೂ ಅಳಿಯ ಗಣೇಶ್ (28). ಮೃತದುರ್ದೈವಿಗಳು.
ಮತ್ತು ಅಳಿಯ ಶಿವಾನಂದ ಹಾಗೂ ಪತ್ನಿ ಜ್ಯೋತಿ ಅವರ ಇಬ್ಬರು ಮಕ್ಕಳಾದ ಯಶ್ವಿನ್ , ವರ್ಷಾ , ಮತ್ತು ಗಣೇಶ್ ಯಮುನಾ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇವರ ದರ್ಶನ ಪಡೆದ ಕುಟುಂಬ: ಗೋವಿಂದ ಅವರ ಕುಟುಂಬ ದೇವರ ದರ್ಶನ ಪಡೆಯಲು ಟೆಂಪಲ್ ರನ್ ಹೋಗಿದ್ದರು.
ನಿನ್ನೆ ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ , ಶೃಂಗೇರಿ ಶಾರದಾ ದೇವಾಲಯ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಸುತ್ತಿ ಬಳಿಕ ರಾತ್ರಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವರ ದರ್ಶನ ಮಾಡಿ ಬಳಿಕ ಅಲ್ಲೆ ತಂಗಿದ್ದರು.
ಇಂದು ಬೆಳಿಗ್ಗೆ ಧರ್ಮಸ್ಥಳ ದಿಂದ ಇವರು ಮಂಗಳೂರು ಕಡೆ ಪ್ರಯಾಣ ಬೆಳೆಸಿದರು.
ಮಂಗಳೂರು ನಿಸರ್ಗ ದಾಮಗಳಿಗೆ ಬೇಟಿ ನೀಡಿ ಬಳಿಕ ಭಟ್ಕಳ ತೆರಳುವ ಉದ್ದೇಶದಿಂದ ಇವರು ಧರ್ಮಸ್ಥಳ ದಿಂದ ಬಿಸಿರೋಡು ಸಂಚಾರ ಬೆಳೆಸಿದ್ದರು.

ಅಂದುಕೊಂಡದ್ದು ಬೇರೆ ನಡೆದದ್ದು ಬೇರೆ: ಕುಟುಂಬ ಸಮೇತ ಬೀಚ್ ನಲ್ಲಿ ಸಮಯ ಕಳೆಯುವ ಉದ್ದೇಶದಿಂದ ಇವರ ತವೆರಾ ಕಾರು ಮೂಲಕ ಮಂಗಳೂರು ಕಡೆಗೆ ಹೊರಟಿದ್ದರು.
ಬಿಸಿರೋಡಿನ ಬ್ರಹ್ಮರಕೊಟ್ಲು ಟೋಲ್ ಗೇಟ್ ಸಮೀಪ ಬರುತ್ತಿದ್ದಂತೆ ಯಮಸ್ವರೂಪಿಯಾಗಿ ಬಂದ ಟ್ಯಾಂಕರ್ ಇವರ ಕಾರಿಗೆ ಬಂದು ಗುದ್ದಿದೆ.
ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಹುಡಿಯಾಗಿದೆ.
ಕಾರು ಚಾಲಕ ರಾಜೇಶ್ ಮಾತ್ರ ಯಾವುದೇ ಗಾಯಗಳಾಗದೆ ಸೇಪ್ ಅಗಿದ್ದಾನೆ ಅದರೆ ಉಳಿದ 11 ಮಂದಿಯಲ್ಲಿ ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ದೇವರ ದರ್ಶನ ಪಡೆದ ಈ ಕುಟುಂಬ ವಿಧಿಯ ಲೀಲೆಗೆ ಬಲಿಯಾಗಿ ನೇರವಾಗಿ ದೇವರ ಪಾದ ಸೇರುವಂತಾಗಿದೆ.
ಇವರ ಸಾವಿನ ಸುದ್ದಿ ತಿಳಿದ ಕುಟುಂಬ ಶೋಕಸಾಗರಲ್ಲಿ ಮುಳುಗಿದೆ.
ಘಟನೆಯಿಂದ ಸ್ಥಳದಲ್ಲಿ ‌ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಘಟನಾ ಸ್ಥಳಕ್ಕೆ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್, ವೃತ್ತನಿರೀಕ್ಷಕ ನಾಗರಾಜ್, ಟ್ರಾಫಿಕ್ ಎಸ್.ಐ.ಮಂಜುನಾಥ್, ಗ್ರಾಮಾಂತರ ಎಸ್.ಐ.ಪ್ರಸನ್ನ, ನಗರ ಠಾಣಾ ಅಪರಾಧ ವಿಭಾಗದ ಎಸ್.ಐ. ಸುಧಾಕರ ತೋನ್ಸೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here