

ಬಂಟ್ವಾಳ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಗುರುವಾರ ವೇದಮೂರ್ತಿ ಕೋಡಿಮಜಲು ಅನಂತಪದ್ಮನಾಭ ಉಪಧ್ಯಾಯ ದೀಪ ಬೆಳಗಿಸಿ ಚಾಲನೆ ನೀಡಿದರು.
ದೇವಳದ ತಂತ್ರಿ ವೆಂಕಟೇಶ್, ಪ್ರ.ಅರ್ಚಕ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರಭಟ್, ರಾಮ್ ಭಟ್, ವಿಷ್ಣುಮೂರ್ತಿನಟ್ಟೋಜ ಹಾಗೂ ದೇವಳದ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸೇಸಪ್ಪ ಕೋಟ್ಯಾನ್ ಪಚಿನಡ್ಕ, ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ್ ಉಪಸ್ಥಿತರಿದ್ದರು. ಶ್ರೀ ರಾಜರಾಜೇಶ್ವರೀ ಭಜನಾಮಂಡಳಿಯ ವೆಂಕಟೇಶ್ ನಾವಡ, ಬಾಬು ರಾವ್, ಮೋಹನದಾಸ್, ನಾರಾಯಣ, ಹರೀಶ್, ಸೇಸಪ್ಪ, ಕುಮಾರ್, ನವೀನ್ ಮತ್ತಿತರರು ಇದ್ದರು. ಗುರುವಾರ ಪೊಳಲಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಅಖಂಡ ಭಜನಾ ಪ್ರಾರಂಭಗೊಂಡು ಏಳು ದಿನಗಳಲ್ಲಿ ನಾನಾ ಜಿಲ್ಲೆಗಳಿಂದ 160ಕ್ಕೂ ಹೆಚ್ಚು ಭಜನಾ ಮಂಡಳಿಗಳು ಶ್ರೀ ದೇವಿಯ ಆರಾಧನಾ ಅಂಗವಾಗಿ ಭಜನಾ ಸೇವೆಗೈಯಲಿವೆ. ಜು.25ರಂದು ಬೆಳಗ್ಗೆ ಮಂಗಳೋತ್ಸವ ನಡೆಯಲಿದೆ.








