


ಬಂಟ್ವಾಳ: ಯುವ ಸಂಗಮ ಮೆಲ್ಕಾರ್ ಇದರ 2019-20 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಓಂ. ಪ್ರಕಾಶ್ ಅಚಾರ್ಯ ಆಯ್ಕೆಯಾಗಿದ್ದಾರೆ. ದುರ್ಗಾಪರಮೇಶ್ವರ ಭಜನಾ ಮಂದಿರದಲ್ಲಿ ಈಚೆಗೆ ನಡೆದ ಯುವಸಂಗಮದ ವಾರ್ಷಿಕ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ಮಾಡಲಾಯಿತು.
ಉಳಿದಂತೆ ಗೌರವಾಧ್ಯಕ್ಷರಾಗಿ ಯಂ.ಯನ್.ಕುಮಾರ್, ಗಣೇಶ ಶೆಟ್ಟಿಗಾರ್, ಕೃಷ್ಣನಾಯ್ಕ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ :- ಅಶೋಕ ಅಚಾರ್ಯ ಸುದರ್ಶನ ಮೆಲ್ಕಾರ್, ಕಾರ್ಯದರ್ಶಿ :- ಹರೀಶ ಶೆಣೈ, ಜತೆ ಕಾರ್ಯದರ್ಶಿ :- ಪೂರ್ಣೇಶ ಅಚಾರ್ಯ, ಪ್ರದೀಪ ಅಚಾರ್ಯ
ಕೋಶಾಧಿಕಾರಿ :- ರಾಜೇಶ ನಾಯಕ್ ಬೋಳಂಗಡಿ, ಕ್ರೀಡಾ ಕಾರ್ಯದರ್ಶಿ :- ಉಮೇಶ ಮೆಲ್ಕಾರ್, ವಿಠ್ಠಲ್ ಶೆಣೈ ಇವರನ್ನು ಆಯ್ಕೆ ಮಾಡಲಾಯಿತು.





