Tuesday, October 31, 2023

ಕಕ್ಯಪದವು ಶ್ರೀ ಬ್ರಹ್ಮ ಬದರ್ಕಳ ಗರಡಿ ಕ್ಷೇತ್ರ ದೃಢ ಕಲಶ, ಅಭಿನಂದನೆ

Must read

ಬಂಟ್ವಾಳ : ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ತೌಳವ ದ್ರಾವಿಡ ಶೈಲಿಯಲ್ಲಿ, ಸಂಪೂರ್ಣ ಶಿಲಾಮಯವಾಗಿ ಪುನರ್ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಳು, ಮಾಯಂದಾಲ್, ಬ್ರಹ್ಮ ಬದರ್ಕಳ ಗರಡಿ ಕ್ಷೇತ್ರದಲ್ಲಿ ಶನಿವಾರ ದೃಢ ಕಲಶ ಮತ್ತು ಅಭಿನಂದನಾ ಕಾರ್ಯಕ್ರಮ ಜರಗಿತು.
ಕಕ್ಯ ಶ್ರೀನಿವಾಸ ಅರ್ಮುಡ್ತಾಯರ ಮಾರ್ಗದರ್ಶನದಲ್ಲಿ, ಕ್ಷೇತ್ರದ ಆಸ್ರಣ್ಣ ರಾಜೇಂದ್ರ ಅರ್ಮುಡ್ತಾಯ, ಸುಽಂದ್ರ ಅರ್ಮುಡ್ತಾಯ ಅವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.


ಬೆಳಗ್ಗೆ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪರ್ವಗಳು, ಬಳಿಕ ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಳು, ಮಾಯಂದಾಲ್ ಮತ್ತು ಬದರ್ಕಳಿಗೆ ದೃಢ ಕಲಶ ನಡೆಯಿತು. ಬಳಿಕ ಅಭಿನಂದನಾ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಿತು.
ಮಾಜಿ ಸಚಿವ, ಪುನರ್ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ, ಅಧ್ಯಕ್ಷ ಬಿ. ಪದ್ಮಶೇಖರ ಜೈನ್, ಮೋಕ್ತೇಸರ ಕುಟುಂಬಸ್ಥರಾದ ರಾಜವೀರ್ ಜೈನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ವಾಸ್ತು ಶಿಲ್ಪಿ ಪ್ರಮಲ್ ಕುಮಾರ್, ಶಿಲ್ಪಿಗಳಾದ ಜಯರಾಮ ಆಚಾರ್ಯ, ಸದಾಶಿವ ಗುಡಿಗಾರ, ಪ್ರಮುಖರಾದ ಸೇಸಪ್ಪ ಕೋಟ್ಯಾನ್,ಚಿತ್ತರಂಜನ್ ಕಂಕನಾಡಿ, ರೋಹಿನಾಥ ಪಾದೆ, ಎ. ಚೆನ್ನಪ್ಪ ಸಾಲ್ಯಾನ್ ಆಜೋಡಿ, ಕೆ.ಮೋನಪ್ಪ ಪೂಜಾರಿ ಕಂಡೆತ್ಯಾರು, ವಿಶ್ವನಾಥ ಸಾಲ್ಯಾನ್ ಬಿತ್ತ, ಡೀಕಯ ಬಂಗೇರ ಕೆಳಗಿನ ಕರ್ಲ, ದಾಮೋದರ ನಾಯಕ್ ಉಳಿ, ರವಿ ಪೂಜಾರಿ ಚಿಲಿಂಬಿ, ಕೆ. ಮೋನಪ್ಪ ಪೂಜಾರಿ ಕಂಡೆತ್ಯಾರು, ಡಾ. ರಾಜಾರಾಮ ಕೆ.ಬಿ., ಡಾ. ದಿನೇಶ್ ಬಂಗೇರ, ಇಂದಿರೇಶ್, ಗುಣಕರ ಅಗ್ನಾಡಿ, ಚಿದಾನಂದ ಕಡೇಶಿವಾಲಯ, ಪ್ರಶಾಂತ್ ಪುಂಜಾಲಕಟ್ಟೆ, ಜಾರಪ್ಪ ಪೂಜಾರಿ, ಬೇಬಿ ಕೃಷ್ಣಪ್ಪ, ಧರ್ಣಪ್ಪ ಪೂಜಾರಿ, ರೋಹಿನಾಥ ಪಟ್ರಾಡಿ, ನವೀನ್ ಕುಮಾರ್, ಸಂಪತ್ ಕುಮಾರ್ ಶೆಟ್ಟಿ, ಚಂದ್ರಶೇಖರ ಕಂರ್ಬಡ್ಕ, ಗುಣಶೇಖರ ಕೊಡಂಗೆ, ಸಂಜೀವ ಪೂಜಾರಿ ಕೇರ್ಯ, ವೀರೇಂದ್ರ ಕುಮಾರ್ ಜೈನ್, ಸಂಜೀವ ಗೌಡ ಅಗಲ, ಚಿದಾನಂದ ರೈ, ಚೇತನ್ ಹೂರ್ದೊಟ್ಟು, ಜಗದೀಶ ಕೊಲ, ಯತೀಶ್ ಶೆಟ್ಟಿ, ವಾಸುದೇವ ಮಯ್ಯ, ಗಣೇಶ್ ಕೆ., ಶ್ರೀಧರ ಆಚಾರ್ಯ, ಗುರುಪ್ರಕಾಶ್, ರಾಜೀವ ಕಕ್ಯಪದವು, ಸುಂದರ ದೇವಾಡಿಗ, ಪರಮೇಶ್ವರ ನಾಯ್ಕ, ರಾಮಯ್ಯ ಭಂಡಾರಿ, ಜಯಾನಂದ ಪೂಜಾರಿ, ತಿಲಕ್, ಪವನ್ ಮತ್ತಿತರರು ಭಾಗವಹಿಸಿದ್ದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

More articles

Latest article