

ಬಂಟ್ವಾಳ: ಶಾಲಾ ಮಕ್ಕಳ ಚಾಲಕ ಮತ್ತು ಮಾಲಕರ ಸಂಘ ದ.ಕ ಬಂಟ್ವಾಳ ಇವರ ವತಿಯಿಂದ ಶಾಲಾ ಮಕ್ಕಳ ಸಂಚಾರಕ್ಕೆ ಕಾನೂನಿನ ಪ್ರಕಾರ ನಿಯಮಗಳನ್ನು ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು ಬಳಿಕ ಟೆಂಪೋ ಮಾಲಕ ಚಾಲಕರ ಸಂಘದ ಅಧ್ಯಕ್ಷ ಸದಾನಂದ ನಾವೂರ ಅವರ ನೇತೃತ್ವದಲ್ಲಿ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ ಮತ್ತು ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.
ಬಂಟ್ವಾಳ ತಾಲೂಕು ಶಾಲಾ ಮಕ್ಕಳ ವಾಹನ ಚಾಲಕರು ಹಾಗೂ ಮಾಲಕರಿಗೆ ಪೊಲೀಸ್ ಇಲಾಖೆ ಕೋರ್ಟ್ ಅದೇಶದ ನೆಪದಲ್ಲಿವಾಹನ ತಪಾಸಣೆ ಮಾಡಿ ನಿಲ್ಲಿಸುತ್ತಿದ್ದಾರೆ. ಇದರಿಂದ ಶಾಲೆಗೆ ಮಕ್ಕಳನ್ನು ಮುಟ್ಟಿಸುವಾಗ ತಡವಾಗುತ್ತದೆ .ಅದಲ್ಲದೆ ಚಾಲಕರ ಲೈಸನ್ಸ್ ಮುಟ್ಟು ಗೋಲು ಹಾಕಿ, ವಾಹನ ದ ಮೇಲೆ ಕೇಸ್ ದಾಖಲಿಸಿ ನಮಗೆ ರೂ 2000 ದಿಂದ 5000 ವರೆಗೆ ಕೋರ್ಟ್ ದಂಡ ಹಾಕುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳನ್ನು ನಮಗೆ ಶಾಲೆಗೆ ಕರೆದುಕೊಂಡು ಹೋಗಲು ಕಷ್ಷವಾಗುತ್ತಿದೆ ಎಂದು ಶಾಲಾ ಮಕ್ಕಳ ವಾಹನ ಚಾಲಕರ ಅಳಲು ಇದೇ ಸಂದರ್ಭದಲ್ಲಿ ಎ.ಎಸ್.ಪಿ.ಸೈದುಲು ಅಡಾವತ್ ಮತ್ತು ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.
ನಮಗೆ ಶಾಲಾ ಮಕ್ಕಳನ್ನು ವಾಹನ ಮಿತಿಯ ಎರಡು ಪಟ್ಟು ಕರೆದುಕೊಂಡು ಹೋಗಲು ಅನುಮತಿ ನೀಡುವಂತೆ ಅಗ್ರಹಿಸಿ ಬಂಟ್ವಾಳ ಖಾಸಗಿ ಶಾಲಾ ಮಕ್ಕಳ ವಾಹನ ವನ್ನು ಜುಲೈ 11 ಗುರುವಾರ ಹಾಗೂ ಜುಲೈ 12 ಶುಕ್ರವಾರ ದಂದು ನಮ್ಮ ವಾಹನಗಳನ್ನು ನಿಲ್ಲಿಸಿ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಬಂಟ್ವಾಳ ತಾಲೂಕಿನ ಎಲ್ಲಾ ಶಾಲಾ ವಾಹನ ಚಾಲಕ , ಮಾಲಿಕರು ಹಾಗೂ ಮಕ್ಕಳ ಪೋಷಕರು ಸಹಕರಿಸಬೇಕಾಗಿ ವಿನಂತಿಯನ್ನು ಮಾಲೀಕರು ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ಎ.ಎಸ್.ಪಿ.ಹಾಗೂ ತಹಶಿಲ್ದಾರ ಅವರು ಮನವಿಯನ್ನು ಮೇಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.








