ಬಂಟ್ವಾಳ: ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ದಶಮಾನೋತ್ಸವದ ಪ್ರಯುಕ್ತ ಜು.12 ಶುಕ್ರವಾರದಂದು ಬೆಳಗ್ಗೆ 9.30ರಿಂದ ಸಂಜೆ 4.30ರ ವರೆಗೆ ಹಲಸು ಮೇಳ ನಡೆಯಲಿದೆ. ವಿವಿಧ ಬಗೆಯ ಹಲಸಿನ ಕರಿದ ತಿಂಡಿ-ತಿನಿಸು, ವಿವಿಧ ಜಾತಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ, ಹಲಸಿನ ಕಸಿ ಕಟ್ಟುವುದರ ತರಬೇತಿ ಮುಂತಾದವುಗಳು ಹಲಸಿನ ಮೇಳದ ವಿಶೇಷತೆಯಾಗಿರುತ್ತದೆ. ವಿಶೇಷ ಆಹ್ವಾನಿತರಾಗಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ಹಲಸಿನ ಕಸಿ ಪರಿಣತ ಜಾಕ್ ಅನೀಲ್, ಲೇಖಕ, ಅಡಿಕೆ ಪತ್ರಿಕೆಯ ಸಹ ಸಂಪಾದಕ ನಾ ಕಾರಂತ ಪೆರಾಜೆ, ಹಿರಿಯ ಕೃಷಿಕ ಸೇಡಿಯಾಪು ಜನಾರ್ದನ ಭಟ್ ಆಗಮಿಸಲಿದ್ದಾರೆ. ಅಲ್ಲದೇ ಈ ಎಲ್ಲಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳೇ ನಿರ್ವಹಣೆ ಮಾಡಲಿದ್ದು ವಿದ್ಯಾರ್ಥಿಗಳು ಆಯೋಜಿಸುವ ಪ್ರಥಮ ಹಲಸಿನ ಮೇಳ ಇದಾಗಿರುತ್ತದೆ. ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8548864572 ಸಂಪರ್ಕಿಸಿ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here