Tuesday, October 17, 2023

ಪರಸ್ಪರ ವೈಯಕ್ತಿಕ ದ್ವೇಷ- ಆರೋಪಕ್ಕೆ ಸಾಕ್ಷಿಯಾದ ಗ್ರಾಮಸಭೆ

Must read

ಮಾಣಿ: ಮಾಣಿ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಮಾಣಿಯ ಪಂಚಾಯತ್ ” ಮಾಣಿಕ್ಯ ” ಸಭಾ ಭವನದಲ್ಲಿ ಜುಲೈ 8 ರಂದು ಜರುಗಿತು. ಗ್ರಾ ಪಂ.ಅದ್ಯಕ್ಷೆ ಮಮತಾ ಎಸ್. ಶೆಟ್ಟಿ ಶಂಭುಗ ಅದ್ಯಕ್ಷ ತೆ ವಹಿಸಿದ್ದರು.

ಗ್ರಾಮ ಸಭೆಯ ಪ್ರಮುಖ ಗಮನ ಸೆಳೆದ ಚರ್ಚೆಗಳ ಮುಖ್ಯಾಂಶಗಳು:

1) ಎಲ್ಲರಿಗೂ ಅಗತ್ಯ ಆದಾರ್ ಕಾರ್ಡ್ ನೊಂದಣಿ/ತಿದ್ದುಪಡಿ ಮಾಣಿ ಪಂಚಾಯತ್ ನಲ್ಲಿ ಆಗುವುದಿಲ್ಲ .ಇನ್ನು ಮುಂದೆ ಮಾಣಿ ಪಂಚಾಯತ್ ನಲ್ಲೇ ಆದಾರ್ ತಿದ್ದುಪಡಿ /ಹೊಸದಾದ ನೋಂದಣಿ ಗೆ ವ್ಯವಸ್ಥೆ ಆಗಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

2) ಇತ್ತೀಜಿನ ಕೆಲವು ವರ್ಷಗಳಲ್ಲಿ ಸ್ತಳೀಯ ರಾಷ್ಟ್ರೀಕೃತ ಬ್ಯಾಂಕ್ ನ ಮ್ಯಾನೆಜರ್ ಗ್ರಾಮಸಭೆಗೆ ಬರುತ್ತಿಲ್ಲ ಯಾಕೆ ? ಎಂದು ಗ್ರಾಮಸ್ತರು ಪ್ರಶ್ನಿಸಿದರು.ಮಾತ್ರವಲ್ಲದೇ ಪ್ರಸ್ತುತ ಈಗಿನ ಮ್ಯಾನೆಜರ್ ಸಾಲ ವಸೂಲಿ ಮಾತ್ರ ಮಾಡುವುದು.ಗ್ರಾಹಕರಿಗೆ ಸಾಲ ಕೊಡುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

3) ಮಾಣಿ – ದಡಿಕೆಮಾರ್ ಪಂಚಾಯತ್ ರಸ್ತೆ ಯ ತೊಂದರೆ ಕುರಿತು ಆ ಪರಿಸರದ ಸ್ತಳೀಯರು ಅಳಲನ್ನು ತೋಡಿಕೊಂಡರು.ಮಾತ್ರವಲ್ಲದೆ ಶೀಘ್ರವಾಗಿ ಸಾರ್ವಜನಿಕರಿಗೆ ಉಪಯೋಗಿಸುವ ಹಾಗೆ ವ್ಯವಸ್ಥೆ ಗೊಳಿಸಬೇಕೆಂದು ಆಗ್ರಹಿಸಿದರು.ಆಗ ಜಿ.ಪಂ. ಸದಸ್ಯರು ಮತ್ತು ಪಂಚಾಯತ್ ಸದಸ್ಯರ ನಡುವೆ ಬಿರುಸಿನ ಚರ್ಚೆ ನಡೆದು ಅದರ ಕಾಮಗಾರಿ ಟೆಂಡರ್ ಹಂತದಲ್ಲಿ ಪ್ರಗತಿ ಪರಿಶೀಲನೆ ಯಲ್ಲಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ತಿಳಿದು ಬಂತು. ಆ ರಸ್ತೆ ಯ ಬಗ್ಗೆ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಸ್ತಳೀಯರು ಪಕ್ಷಾತೀತವಾಗಿ ಬೇಸರಿಸಿಕೊಂಡ ಹಾಗೆ ಕಂಡು ಬಂತು.

 

4) ಮಾಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡವರಿಗೆ ಮನೆ ಹಂಚಿಕೆ ಆಗಿಲ್ಲದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರ ಅಲ್ಲದೇ ಮಾಣಿ ಗ್ರಾಮದಲ್ಲಿ ಕೆಲವು ಕಡೆ ಸರಕಾರಿ ಭೂಮಿ ಒತ್ತುವರಿ ಆಗುತ್ತಿದೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು. ಆದಷ್ಟು ಬೇಗ ಬಡವರಿಗೆ ಮನೆಕಟ್ಟಲು ಜಾಗ ಮಂಜೂರು ಮಾಡುವಂತೆ ಮಾತ್ರವಲ್ಲದೆ ಮಾಣಿ ಮೆಸ್ಕಾಂ ಗೆ ಸ್ವಂತ ಕಟ್ಟಡವನ್ನು ನಿರ್ಮಿಸಲು ಜಾಗವನ್ನು ಗುರುತಿಸುವಂತೆ ಕೆಲವು ಸಾರ್ವಜನಿಕರು ಆಗ್ರಹಿಸಿದರು.

5) ಮಾಣಿ ಜಂಕ್ಷನ್ ನಲ್ಲಿ ಹೆಚ್ಚು ಕಸ ಕಂಡುಬರುತ್ತಿದ್ದು ಸ್ವಚ್ಚತೆ ಯ ಬಗ್ಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ತಾ .ಪಂ .ಸದಸ್ಯೆ ಮಂಜುಳಾ ಕುಶಲ ಪೆರಾಜೆ ಸಭೆಯಲ್ಲಿ ಹೇಳಿದರು .   ಆಗ ಮಾಣಿಯ ತರಕಾರಿ ವ್ಯಾಪಾರಿ ಉಮ್ಮರ್ ರವರು ಕಸ ವಿಲೇವಾರಿ ಗೆ ಸಂತೆ ಮಾರುಕಟ್ಟೆ ಪರಿಸರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಆಗ ಕೆಲ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕ ರ ನಡುವೆ ಬಿರುಸಿನ ಚರ್ಚೆ ನಡೆಯಿತು.

6) ಮಾಣಿ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ಅನಧಿಕೃತ ವ್ಯಾಪಾರಕ್ಕೆ ಲೈಸೆನ್ಸ್ ನೀಡಲಾಗಿದೆ ಎಂದು ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಆಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂತೆ ಮಾರುಕಟ್ಟೆಪರಿಸರದಲ್ಲಿ ತಾತ್ಕಾಲಿಕ ಲೈಸೆನ್ಸ್ ಮಾತ್ರ ನೀಡಲಾಗಿದೆ ಎಂದು ಹೇಳಿದರು. ಆಗ ಸಾರ್ವಜನಿಕರ ನಡುವೆ ಒಂದು ನಿಮಿಷ ಬಿಸಿ – ಬಿಸಿ ಚರ್ಚೆ ನಡೆಯಿತು .ಕೈ – ಕೈ ಮಿಲಾಯಿಸುವ ಹಂತ ಬಂದಾದ ಸಭೆಯಲ್ಲಿ ಇದ್ದ ಪಂಚಾಯತ್ ಸದಸ್ಯರು ಮತ್ತು ಸಭಾದ್ಯಕ್ಷರು ಸಮಾದಾನ ಮಾಡಿ ಸಭೆ ಸುಗಮ ಆಗುವಂತೆ ಮಾಡಿದರು.

ಆರೋಗ್ಯ, ಕಂದಾಯ,ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ,ತೋಟಗಾರಿಕೆ ,ಕೃಷಿ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ತಾಲೂಕು ಹಿಂದುಳಿದ ವರ್ಗಗಳ ಶಿಕ್ಷಣ ಅಧಿಕಾರಿಗಳಾದ ಶಿವಣ್ಣ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ,
ಮಾಣಿ ಗ್ರಾ.ಪಂ. ಅಭಿವೃದ್ಧಿ ಅದಿಕಾರಿ ನಾರಾಯಣ ಗಟ್ಟಿ, ಪಂಚಾಯತ್ ಉಪಾಧ್ಯಕ್ಷೆ  ಸಂಪಾವತಿ,ಸದಸ್ಯರು, ಸಿಬ್ಬಂದಿಗಳು
ಉಪಸ್ಥಿತರಿದ್ದರು.

 

More articles

Latest article