Wednesday, October 18, 2023

*ಮಾಡರ್ನ್ ಕವನ* – *ಸೊಳ್ಳೆ*

Must read

ಗುಂಯ್ ಎನ್ನುವ ಸೊಳ್ಳೆಗೆ
ರಕ್ತ ಹೀರುವ
ಕೆಲಸ ಒಂದೇ ಜೀವನಕ್ಕೆ ಆಧಾರ…!

ರಾತ್ರಿಯಾದರೆ ಸಾಕು
ಮನೆಯೊಳಗೆ ಮುತ್ತಿಗೆ..!
ಆಷಾಢ ಮಾಸದಲ್ಲಿ ಹೆಂಡತಿ ಕಾಟ ತಪ್ಪಿದರು
ಯಾವ ಕಾಲದಲ್ಲೂ ಸೊಳ್ಳೆ ಕಾಟ ತಪ್ಪದು ನಮಗೆ..!
ಫ್ಯಾನ್, ಕಾಯಿಲ್,ಆಲ್ ಔಟ್,
ಗುಡ್ ನೈಟ್
ಅದಂತೆ ಇದಂತೆ
ನಾನಾ ಶಸ್ತ್ರಾಸ್ತ್ರಗಳು
ಸೊಳ್ಳೆಯ ಕೊಲೆಗೆ…!

ರಕ್ತ ಹೀರಿ ಹರಡಿ ಹೋಗುತ್ತೆ ಕಾಯಿಲೆ
ಮಲೇರಿಯಾ, ಡೆಂಗ್ಯೂ,ಚಿಕನ್ ಗುನ್ಯಾ…,
ಅದೇನೇನೋ ಕಾಯಿಲೆ
ಕಾರಣ ಸೊಳ್ಳೆಯಂತೆ..!
ಹುಟ್ಟಡಗಿಸಬೇಕು, ಎಚ್ಚರವಹಿಸಬೇಕು..
ಇಲ್ಲವೆಂದಾದರೆ ಮಸಣದಲ್ಲಿ ಜಾಗ ಕಾದಿರಿಸಬೇಕು..!

ಜಾಗ್ರತೆ ವಹಿಸಿ
ರಕ್ತ ಹೀರುವವರಿದ್ದಾರೆ..!
ಸೊಳ್ಳೆಯಂತೆ..!
ಚರಂಡಿ ಕ್ಲೀನ್ ಮಾಡಿ
ಮನೆ, ಮನದ ಸುತ್ತ..!
ನೀರು ನಿಲ್ಲಲು ಬಿಡಬೇಡಿ..
ಅಲ್ಲಿ ಇಲ್ಲಿ ,ಎದೆಯಲ್ಲಿ..!
ಸೊಳ್ಳೆ ಪರದೆ ಎಳೆಯಿರಿ
ಮನೆ ಕಿಟಕಿಗೆ,ಸುಳ್ಳು ಸುದ್ದಿಗೆ..!
ಬೆಂಕಿ ಹಚ್ಚಿಡಿ
ಸೊಳ್ಳೆ ಬತ್ತಿಗೆ,ಕೆಟ್ಟ ಯೋಚನೆಗೆ..!

ರಕ್ತ ಹೀರಲು ಬಿಡಬೇಡಿ
ರಕ್ತ ಹೀರಲು ಬೇಡಿ..!

 

✍ಯತೀಶ್ ಕಾಮಾಜೆ

More articles

Latest article