






ಬಂಟ್ವಾಳ: ಜುಗಾರಿ ಆಟವಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸರು ಆಟದಲ್ಲಿ ನಿರತರಾಗಿದ್ದ 5 ಜನರ ಹಾಗೂ ಆಟಕ್ಕೆ ಉಪಯೋಗಿಸಿದ ನಗದು ವಶಪಡಿಸಿಕೊಂಡ ಘಟನೆ ನಡೆದಿದೆ.
ವಸಂತ, ಶೀನ, ಯಶೋಧರ, ಶೇಖರ ಪೂಜಾರಿ, ಕೇಶವ ಪೂಜಾರಿ ಎಂಬ 5 ಜನರನ್ನು ವಶಕ್ಕೆ ಪಡೆದಿದ್ದು, ಅವರಿಂದ ಇಸ್ಪೀಟು ಎಲೆಗಳು, ಪಣಕ್ಕೆ ಇಟ್ಟಿದ್ದ 5,120/- ರೂ ಹಣವನ್ನು ವಶಕ್ಕೆ ಪಡೆದಕೊಳ್ಳಲಾಗಿದೆ.
ಜುಲೈ 9 ಮಂಗಳವಾರ ರಂದು ಸಂಜೆ ಸುಮಾರು 5.00 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ನಾವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಹಿಂಭಾಗದಲ್ಲಿ ಹಣವನ್ನು ಪಣಕ್ಕೆ ಇಟ್ಟು ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ್ದರು.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ಯಲ್ಲಿ ಪ್ತಕರಣ ದಾಖಲಾಗಿರುತ್ತದೆ. ದಾಳಿಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ. ಎಂ.ಎಸ್, ಹೆಚ್.ಸಿಗಳಾದ ಜನಾರ್ಧನ, ಜಯರಾಮ, ಸುಂದರ, ರಾಧಾಕೃಷ್ಣ, ಪಿ.ಸಿಗಳಾದ ಮನೋಜ್, ಬಸವರಾಜ್, ಶಿವಕುಮಾರ್ ನಾಯ್ಕ ಪಾಲ್ಗೊಂಡಿದ್ದರು.





