

ಬಂಟ್ವಾಳ: ಶಾಲಾ ಮಕ್ಕಳ ಸಾಗಾಟ ಮಾಡುವ ವಾಹನಗಳಿಗೆ ಸಂಚಾರ ಕಾನೂನಿನಲ್ಲಿ ಸಡಿಲಿಕೆ ಮಾಡಬೇಕು ಎಂದು ಶನಿವಾರ ತಹಶಿಲ್ದಾರರಿಗೆ ಟೆಂಪೋ ಮಾಲಕರು ಹಾಗೂ ಚಾಲಕರು ಎಸ್.ವಿ.ಎಸ್.ಅಂಗ್ಲ ಮಾಧ್ಯಮ ಶಾಲೆಯ ಸಮೀಪ ಮನವಿ ಮಾಡಿದರು.
ಪೋಲೀಸರು ನಿತ್ಯ ಶಾಲಾ ಬಳಿ ಬಂದು ಪ್ರಕರಣ ದಾಖಲಿಸುವುದರಿಂದ ನಮಗೆ ದುಡಿಮೆ ಮಾಡಲು ಸಾಕಷ್ಟು ತೊಂದರೆ ಯಾಗುತ್ತಿದೆ ಎಂದು ದೂರಿದರು.
ವರ್ಷಕ್ಕೆ ನಾವು 33 ಸಾವಿರ ಟ್ಯಾಕ್ಸ್ ಕಟ್ಟುತ್ತೇವೆ. ಟೆಂಪೋ ವಾಹನದ ಆರ್.ಟಿ.ಒ.ಪ್ರಕಾರ 12 ಸೀಟುಗಳು ಇವೆ, ಅದರೆ ನಾವು 25 ಮಕ್ಕಳನ್ನು ಟೆಂಪೋ ಮೂಲಕ ಸಾಗಿಸುತ್ತೇವೆ.
ಇಷ್ಟು ದುಬಾರಿ ಟ್ಯಾಕ್ಸ್ ಕಟ್ಟಿ 12 ಮಕ್ಕಳ ಸಾಗಾಟ ಮಾಡಿದರೆ ನಮಗೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಕಾನೂನಿನಲ್ಲಿ ಅಥವಾ ಸಂಚಾರಿ ನಿಯಮದಲ್ಲಿ ತುಸು ರಿಯಾಯತಿ ನೀಡಬೇಕು ಎಂದು ಒತ್ತಾಯಿಸಿದರು..
ಇದೇ ರೀತಿ ಮುಂದುವರಿದರೆ ನಾವು ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಎ.ಎಸ್.ಪಿ.ಜೊತೆ ಮಾತನಾಡಿ ವಿಶೇಷ ಸಭೆ ಕರೆಯುತ್ತೇನೆ ಎಂದರು.







