ಬಂಟ್ವಾಳ : ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ಇದರ ಶಿಕ್ಷಕ-ರಕ್ಷಕರ ಸಂಘದ ವಾರ್ಷಿಕ ಮಹಾಸಭೆಯು ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದ ಸಭಾಂಗಣದಲ್ಲಿ ನಡೆಯಿತು. ಅತಿಥಿಯಾಗಿದ್ದ ಪುರಸಭೆಯ ಹಿರಿಯ ಸದಸ್ಯ,  ಶಾಲಾ ಸಂಚಾಲಕ ಎ.ಗೋವಿಂದ ಪ್ರಭು ಅವರು ಮಾತನಾಡಿ,ಪ್ರಸ್ತುತ ಸಾಲಿನಲ್ಲಿ ಯೋಗ ಸಹಿತ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳನ್ನು ಪ್ರೆರೇಪಿಸಲಾಗುತ್ತಿದೆ, ಶಾಲೆಯ ಅಭಿವೃದ್ದಿಯಲ್ಲಿ ಪೋಷಕರ ಸಹಕಾರವು ಅತ್ಯಗತ್ಯವಿದೆ ಎಂದರು.ಪ್ರಸಕ್ತ ವರ್ಷ ಸಹಿತ  ಹಲವು ವರ್ಷಗಳಿಂದ ಎಸ್. ಎಸ್. ಎಲ್. ಸಿ.  ಪರೀಕ್ಷೆಯಲ್ಲಿ ಶಾಲೆಗೆ ನಿರಂತರವಾಗಿ ಶೇ.100 ಫಲಿತಾಂಶ ದಾಖಲಾಗುತ್ತಿರುವುದು ಸಂತಸ ತಂದಿದ್ದು,ಇದಕ್ಕಾಗಿ ಶ್ರಮಿಸುತ್ತಿರುವ ಶಿಕ್ಷಕಿ – ಶಿಕ್ಷಕ ವೃಂದವನ್ನು ಗೋವಿಂದ ಪ್ರಭು ಅಭಿನಂದಿಸಿದರು.ಶ್ರೀ ತಿರುಮಲ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರಾದ ಪುರುಷೋತ್ತಮ ಶೆಣ್ಯೆ ಸಭಾಧ್ಯಕ್ಷತೆ ವಹಿಸಿದ್ದರು.ಮೊಕ್ತೇಸರ ಪ್ರವೀಣ್ ಕಿಣಿ,ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀನಿವಾಸ ಪೈ,ಮಂಜುನಾಥ ಆಚಾರ್ಯ,ಪ್ರಕಾಶ್ ಪ್ರಭು,ವಸಂತಮಲ್ಯ,ರಿತೇಶ್ ಬಾಳಿಗಾ, ಶಿಕ್ಷಕ -ರಕ್ಷಕ ಸಂಘದ ಉಪಾಧ್ಯಕ್ಷೆ ಸುಪ್ರಿಯಾ ಭಟ್ ಮೊದಲಾದವರು ವೇದಿಕೆಯಲ್ಲಿದ್ದರು.

ಇದೇ ವೇಳೆ ಕೆಲ ಪೋಷಕರು ವಿವಿಧ ಸಲಹೆ,ಸೂಚನೆಗಳನ್ನಿತ್ತರಲ್ಲದೆ,ಪ್ರಸಕ್ತ ಸಾಲಿನಲ್ಲಿಯೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿರುವಲ್ಲಿ ಶ್ರಮಿಸಿದ ಶಿಕ್ಷಕ ವೃಂದವನ್ನು ಅಭಿನಂದಿಸಿದರು.                                                 ಶಿಕ್ಷಕಿ ಪ್ಲೋಸಿ ಲೋಬೋ ಮುಂದಿನ ಸಾಲಿನ ಅಯವ್ಯಯ ಮಂಡಿಸಿದರು.ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿಸೋಜ ಗತವರ್ಷದ ವರದಿ ವಾಚಿಸಿದರು. ಇನ್ನೊರ್ವ ಮುಖ್ಯೋಪಾಧ್ಯಾಯಿನಿ ಕುಸುಮಾವತಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಚಂದ್ರಹಾಸ್ ಎಂ.ವಂದಿಸಿದರು.ಶಿಕ್ಷಕ ಮುರಳೀಧರ್ .ಪಿ.ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here