ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಮತ್ತು ಎಸ್.ವಿ.ಎಸ್ ದೇವಳ ವಿದ್ಯಾಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ  ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.  ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ನಿರಂತರ ಅಭ್ಯಾಸದಿಂದ ಯೋಚನಾಕ್ರಮ ಬದಲಾಗುತ್ತದೆ. ಎಳೆಯ ವಯಸ್ಸಿನಲ್ಲಿಯೇ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ನಕಾರಾತ್ಮಕ ಯೋಚನೆ ದೂರವಾಗಿ ಮನಸ್ಸು ಕ್ರಿಯಾಶೀಲವಾಗುತ್ತದೆ ಎಂದರು. ಶ್ರೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣ್ಯೆ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಗೋವಿಂದ ಪ್ರಭು, ಪ್ರವೀಣ್ ಕಿಣಿ, ಶ್ರೀನಿವಾಸ ಪೈ, ಪ್ರಕಾಶ್ ಪ್ರಭು, ವಸಂತಮಲ್ಯ, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ಗೋಕುಲನಾಥ್ , ತರಬೇತುದಾರರಾದ ನಾರಾಯಣ, ಮಲ್ಲಿಕಾ, ಎಸ್ .ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ರೋಶನಿ ತಾವ್ರೋ, ಕುಸುಮಾವತಿ, ಎಸ್.ವಿ.ಎಸ್.ದೇವಳ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯಾರಾದ ನಂದಿನಿ ವೇದಿಕೆಯಲ್ಲಿದ್ದರು. ಎಸ್.ವಿ.ಎಸ್.ದೇವಳ ವಿದ್ಯಾಸಂಸ್ಥೆಯ ಐದರಿಂದ ಹತ್ತನೆ ತರಗತಿ ವರೆಗಿನ ಸುಮಾರು 700 ವಿದ್ಯಾರ್ಥಿಗಳು ಬಳಿಕ ನಡೆದ ಯೋಗ ಶಿಬಿರದಲ್ಲಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here