ಉಜಿರೆ: ಧರ್ಮಸ್ಥಳದ ಶಾಂತಿವನಟ್ರಸ್ಟ್‌ಹಾಗೂಉಜಿರೆಯಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಕಾಲೇಜಿನಜಂಟಿಆಶ್ರಯದಲ್ಲಿಇದೇ ೨೧ ರಂದು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿಐದನೆ ವಿಶ್ವಯೋಗ ದಿನಾಚರಣೆ ನಡೆಯಲಿದೆಎಂದುಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ.


ಬೆಳಿಗ್ಗೆ ಗಂಟೆ ೭ ರಿಂದ ೭.೪೫ ರ ವರೆಗೆಒಂದು ಸಾವಿರ ಶಿಬಿರಾರ್ಥಿಗಳಿಂದ
ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ನಡೆಯುತ್ತದೆ.ಬಳಿಕ ಎಂಟುಗಂಟೆಗೆ ನಡೆಯುವ ಸಮಾರಂಭದಲ್ಲಿರಾಜ್ಯ ಸರ್ಕಾರದ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ರಾಜೀವ್‌ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಡಾ.ಎಸ್. ಸಚ್ಚಿದಾನಂದ, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಕೆ.ಅಭಯಚಂದ್ರಜೈನ್ ಮತ್ತು ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಭಾಸ್ಕರ ಹಂದೆ ಭಾಗವಹಿಸುವರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರುಅಧ್ಯಕ್ಷತೆ ವಹಿಸುವರು.
ಸಭಾಕಾರ್ಯಕ್ರಮದ ಬಳಿಕ ಧರ್ಮಸ್ಥಳ ಮತ್ತು ಶಾಂತಿವನ ಪರಿಸರದಲ್ಲಿಯೋಗ ಪ್ರತಿನಿಧಿಗಳಿಂದ ಸ್ವಚ್ಛತಾಅಭಿತಯಾನ ಹಮ್ಮಿಕೊಳ್ಳಲಾಗಿದೆ.
ಮುಖ್ಯಾಂಶಗಳು:
ಕೇಂದ್ರ ಸರ್ಕಾರದಆಯುಷ್ ಮಂತ್ರಾಯಲದ ನಿರ್ದೇಶನದಂತೆಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು, ಹಾಸನ ಮತ್ತುತುಮಕೂರುಜಿಲ್ಲೆಯ ವ್ಯಾಪ್ತಿಯಲ್ಲಿತಲಾ ಹದಿನೈದು ಕೇಂದ್ರಗಳಲ್ಲಿ ಹತ್ತು ದಿನಗಳ ಕಾಲ ಸಾವಿರಾರುಜನರಿಗೆಉಚಿತಯೋಗ ಶಿಬಿರ ಆಯೋಜಿಸಲಾಗಿದೆ.
ಶುಕ್ರವಾರಆಯಾಜಿಲ್ಲಾ ಕೇಂದ್ರಗಳಲ್ಲಿ ವಿಶ್ವಯೋಗ ದಿನಾಚರಣೆ ನಡೆಯುತ್ತದೆ.
ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಏಕಕಾಲದಲ್ಲಿ ಶುಕ್ರವಾರ ಬೆಳಿಗ್ಗೆ ಗಂಟೆ ೭ ರಿಂದ ೭.೪೫ರ ವರೆಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಯುತ್ತದೆ.
ಬೆಳ್ತಂಗಡಿ ತಾಲ್ಲೂಕಿನಎಲ್ಲಾ ಶಾಲೆಗಳಲ್ಲಿ ಜೂನ್ ೧೦ ರಿಂದ ೨೦ರ ವರೆಗೆಯೋಗತರಬೇತಿಕಾರ್ಯಕ್ರಮ ನಡೆಸಿ ಇದೇ ೨೧ ರಂದು ಶುಕ್ರವಾರ ಏಕ ಕಾಲದಲ್ಲಿ ಸಾಮೂಹಿಕ ಯೋಗ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತುಕಾರ್ಯಾಗಾರ ನಡೆಯುತ್ತದೆ.
ಬಳಿಕ ಸ್ವಚ್ಛತಾಅಭಿಯಾನ ಹಮ್ಮಿಕೊಳ್ಳಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here