Tuesday, October 31, 2023

ಸರಕಾರಿ ಬಸ್ ಚರಂಡಿಗೆ: ಯಾವುದೇ ಅಪಾಯವಿಲ್ಲ

Must read

ಬಂಟ್ವಾಳ: ಟ್ಯಾಂಕರ್ ಲಾರಿಯೊಂದು ಒವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಸರಕಾರಿ ಬಸ್ ಗೆ ಹೋಗಲು ದಾರಿಯಿಲ್ಲದೆ ಮಳೆ ನೀರು ಹರಿದು ಹೋಗುವ ಚರಂಡಿಗೆ ಇಳಿದು ಅದೃಷ್ಟವಶಾತ್ ಪಲ್ಟಿಯಾಗದೆ ಓರೆಯಾಗಿ ನಿಂತುಕೊಂಡ ಘಟನೆ ಮಾಣಿ ಸಮೀಪದ ಅಳಿರ ಎಂಬಲ್ಲಿ ನಡೆದಿದೆ.


ಸುಬ್ರಹ್ಮಣ್ಯ ಕಡೆಯಿಂದ ಮಂಗಳೂರು ಕಡೆಗೆ ಸುಮಾರು 40 ಮಂದಿ ಪ್ರಯಾಣಿಕರು ಸಂಚಾರ ಮಾಡುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಮಾಣಿ ಸಮೀಪದ ಅಳಿರ ಸಮೀಪಿಸುತ್ತಿದ್ದಂತೆ ಎದುರುಗಡೆಯಿಂದ ಅತಿ ವೇಗ ದಿಂದ ಬಂದ ಒವರ್ ಟೇಕ್ ಮಾಡುತ್ತಿದ್ದ ಟ್ಯಾಂಕರ್ ಲಾರಿ ಗೆ ದಾರಿ ಬಿಟ್ಟು ಕೊಡಲು ಹೋಗಿ ಮಳೆ ನೀರು ಹರಿದು ಹೋಗುವ ಚರಂಡಿ ಗೆ ಇಳಿದು ಓರೆಯಾಗಿ ನಿಂತಿದೆ.
ಘಟನೆಯಲ್ಲಿ ಬಸ್ ಬ್ರೇಕ್ ಹಾಕುವ ವೇಳೆ ನಿರ್ವಾಹಕ ನೋರ್ವನಿಗೆ ಗುದ್ದಿದ ಗಾಯವಾಗಿದೆ.
ಅದು ಬಿಟ್ಟರೆ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಬಸ್ ನಲ್ಲಿದ್ದ ಪ್ರಯಾಣಿಕರ ಬಸ್ ನ ತುರ್ತು ನಿರ್ಗಮನದ ಬಾಗಿಲಿನ ಮೂಲಕ ಹೊರ ಬರುವ ಪ್ರಯತ್ನ ಮಾಡಿದ್ದಾರೆ.
ಸ್ಥಳೀಯರು ಸೇರಿ ಪ್ರಯಾಣಿಕರನ್ನು ಬಸ್ ನಿಂದ ಹೊರಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಸ್ಥಳಕ್ಕೆ ವಿಟ್ಲ ಎಸ್.ಐ.ಯಲ್ಲಪ್ಪ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

More articles

Latest article