ಬಂಟ್ವಾಳ: ದುಡಿಯಲು ಶಕ್ತಿಯಿಲ್ಲ, ತನ್ನವರು , ಕೇಳುವವರು ಅಂತ ಯಾರೂ ಇಲ್ಲ, ಒಪ್ಪೋತ್ತಿನ ಊಟಕ್ಕೂ ಇನ್ನೋಬ್ಬರ ಕೈ ಚಾಚುವ ಸನ್ನಿವೇಶ, ಮಾನ ಕಾಪಾಡಲು ಅರೆಬರೆ ಬಟ್ಟೆ , ದೇವಸ್ಥಾನ, ಮಠ, ಮಂದಿರ ಚರ್ಚ್ ಗಳೇ ವಾಸಸ್ಥಾನ ಅಂತ ಊರೂರು ಸುತ್ತಿ ಬಸವಳಿದ ವೃದ್ದರೋರ್ವರನ್ನು ವೃದ್ದಾ ಆಶ್ರಮ ಕ್ಕೆ ಕಳುಹಿಸಿ ಮಾನವೀಯತೆ ಮೆರೆದ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್.

ಇವರ ಹೆಸರು
ಅಶೋಕ್ ನಾಯಕ್ ಪ್ರಾಯ ೬೩ ವರ್ಷ ತಂದೆ: ನರಸಿಂಹ ಶ್ರೀನಿವಾಸ ನಾಯಕ್, ವಾಸ: ಅಂಬಲಪಾಡಿ ಉಡುಪಿ ತಾಲೂಕಿನವರು.

ಸುಮಾರು ೨೦ ದಿನಗಳಿಂದ ಬಂಟ್ವಾಳ ನಗರ ಠಾಣಾ ಸರಹದ್ದಿನ ದೇವಸ್ಥಾನ, ಚರ್ಚ್, ಬಸ್ಸು ನಿಲ್ದಾಣದಲ್ಲಿ ಉಳಕೊಳ್ಳುತ್ತಿದ್ದು, ಈ ವಿಚಾರವನ್ನು ಸಾರ್ವಜನಿಕರು ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರ ಗಮನಕ್ಕೆ ತಂದರು.
ಎಸ್‌. ಐ.ಅವರು ಸಿಬ್ಬಂದಿ ಗಳ ಜೊತೆ ಸೇರಿ ಅವರನ್ನು ಠಾಣೆ ಗೆ ಕರೆಸಿ ಕೊಂಡು ಬಂದು
ವಿಚಾರಣೆ ನಡೆಸಿದಾಗ ಅಶೋಕ್ ನಾಯಕ್‌ರವರು ಪ್ರಾಯಸ್ಥರಾಗಿದ್ದು, ವಾರೀಸುದಾರರು ಯಾರೂ ಇರುವುದಿಲ್ಲವಾಗಿ ತಿಳಿಸಿದ್ದಾರೆ.
ಉಡುಪಿ ನಿವಾಸಿಯಾಗಿದ್ದು ಇವರ ಪತ್ನಿ ಸರಸ್ವತಿ ಅವರು ಸುಮಾರು 26 ವರ್ಷಗಳ ಹಿಂದೆ ಗಂಡು ಮಗವಿಗೆ ಜನ್ಮ ನೀಡಿ ಪ್ರಥಮ ಹೆರಿಗೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.
ಅಬಳಿಕ ಮಗನನ್ನು ಸಾಕುತ್ತಾ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದರು.
ದಿನ ಕಳೆದಂತೆ ಮಗ ತಂದೆಯನ್ನು ದೂರ ಮಾಡಿದ್ದಾನೆ ಎಂದು ಅವರ ಹೇಳುತ್ತಾರೆ.
ಅ ಬಳಿಕವೂ ಇವರು ಕೂಲಿ ಕೆಲಸ ಮಾಡುತ್ತಾ ಬದುಕು ಸಾಗಿಸುತ್ತಿದ್ದರು .
ಆದರೆ ಇತ್ತೀಚಿಗೆ ಇವರಿಗೆ ದುಡಿಯಲು ಶಕ್ತಯಿಲ್ಲದ ಕಾರಣ ದೇವಸ್ಥಾನದಲ್ಲಿ ಉಳಿದುಕೊಳ್ಳುತ್ತಿದ್ದರು.
ಕಳೆದ ಕೆಲ ದಿನಗಳಿಂದ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ದಲ್ಲಿಯೇ ಇವರ ವಾಸವಾಗಿತ್ತು.
ಆದರೆ ಮಳೆ ಬರದೆ ಧರ್ಮಸ್ಥಳ ದಲ್ಲಿ ನೀರಿನ ಕೊರತೆಯಾದಾಗ ಇವರು ಬಂಟ್ವಾಳ ದ ಕಡೆ ಬಂದಿದ್ದರು.
ಹಾಗೆ ಬಂದವರು ಬಂಟ್ವಾಳ ದ ವಿವಿಧ ದೇವಸ್ಥಾನ ಗಳ ಹಾಗೂ ಚರ್ಚ್ ಗಳ ಬಾಗಿಲಿನ ಮಲಗಿಕೊಂಡು ದಿನ ದೂಡುತ್ತಿದ್ದರು.
ಇವರ ಬಗ್ಗೆ ಸಾರ್ವಜನಿಕ ರು ಬಂಟ್ವಾಳ ಎಸ್.ಐ. ಚಂದ್ರಶೇಖರ ಅವರಿಗೆ ಮಾಹಿತಿ ನೀಡಿದರು.
ಎಸ್.ಐ.ಅವರು ಇವರಿಗೆ ಬಟ್ಟೆ ಬರೆ ನೀಡಿ

ಅಶೋಕ ನಾಯಕ ಅವರನ್ನು
ಸ್ನೇಹಾಲಯ ಮಂಜೇಶ್ವರ ವೃದ್ದಾ ಆಶ್ರಮಕ್ಕೆ ಕಳುಹಿಸಿಕೊಡಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here