ಬಂಟ್ವಾಳ : ಗ್ರಾಮ ಪಂಚಾಯತ್‌ನ ಪಿಕಪ್ ವಾಹನವನ್ನು ವಶಪಡಿಸಿಕೊಂಡ ಫಾರೆಸ್ಟ್ ಗಾರ್ಡ್ ರೊಬ್ಬರಿಗೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರು ದಿಗ್ಬಂಧನ ಹಾಕಿದ ಘಟನೆ ಶನಿವಾರ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿಯಲ್ಲಿ ಸಂಭವಿಸಿದೆ.
ಅರಣ್ಯ ಪ್ರದೇಶದಲ್ಲಿ ತ್ಯಾಜ್ಯ ಹಾಕುತ್ತಾರೆ ಎಂಬ ನೆಪದಲ್ಲಿ ಜೂ. ೧೪ರಂದು ಚೆನ್ನೈತ್ತೋಡಿ ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿಯ ಪಿಕಪ್ ವಾಹನವನ್ನು ವೇಣೂರು ಅರಣ್ಯ ವಲಯದ ಫಾರೆಸ್ಟ್ ಗಾರ್ಡ್ ಕೃಷ್ಣ ಜೋಗಿ ವಶಪಡಿಸಿಕೊಂಡು ವೇಣೂರು ಕಚೇರಿಗೆ ಸಾಗಿಸಿದ್ದರು. ಈ ಬಗ್ಗೆ ಪಂ. ಅ. ಅಽಕಾರಿ ಮತ್ತು ಗ್ರಾ.ಪಂ. ಅಧ್ಯಕ್ಷ ಯತೀಶ್ ಶೆಟ್ಟಿ ಅವರು ತಾ.ಪಂ.ಮುಖ್ಯ ಕಾರ್ಯನಿರ್ವಹಣಾಽಕಾರಿ ಮತ್ತು ದ.ಕ.ಜಿ.ಪಂ.ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದರು.ಇದಕ್ಕೆ ಸ್ಪಂದಿಸಿದ ಅಽಕಾರಿಗಳು ವೇಣೂರು ಫಾರೆಸ್ಟ್ ರೇಂಜರ್ ಅವರಿಗೆ ಪಿಕಪ್ ವಾಹನವನ್ನು ಬಿಟ್ಟುಬಿಡುವಂತೆ ಸೂಚಿಸಿದ್ದರು. ಆದರೆ ಫಾರೆಸ್ಟ್ ರೇಂಜರ್ ಪ್ರಶಾಂತ್ ಪೈ ಅವರು ಹತ್ತು ಸಾವಿರ ರೂ. ದಂಡ ಪಾವತಿಸುವಂತೆ ಗ್ರಾಮ ಪಂಚಾಯತ್‌ಗೆ ತಿಳಿಸಿದ್ದರು. ಆದರೆ ಈ ಬಗ್ಗೆ ಪೊಲೀಸ್ ದೂರು ನೀಡಲು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು ಎಂದು ಗ್ರಾ.ಪಂ. ಅಧ್ಯಕ್ಷ ಯತೀಶ್ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಗಾರ್ಡ್ ಕೃಷ್ಣ ಜೋಗಿ ಅವರು ಪಿಕಪ್ ಚಾಲಕನನ್ನು ಕರೆದು ವಾಹನ ವಶಪಡಿಸಿಕೊಂಡ ಬಗ್ಗೆ ಸಾಕ್ಷಿ ಒದಗಿಸಲು ಚೆನ್ನೈತ್ತೋಡಿಗೆ ಆಗಮಿಸಿದ ಸಂದರ್ಭ ಗ್ರಾ.ಪಂ. ಅಧ್ಯಕ್ಷರ ಸಹಿತ ಗ್ರಾ.ಪಂ. ಸದಸ್ಯರು ಮತ್ತು ಗ್ರಾಮಸ್ಥರು ದಿಗ್ಬಂಧನ ಹಾಕಿ ಗಾರ್ಡ್ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪಿಕಪ್ ವಾಹನವನ್ನು ವಾಪಾಸ್ ಕೊಡುವಂತೆ ಪಟ್ಟು ಹಿಡಿದರು. ಈ ಬಗ್ಗೆ ಮಾಹಿತಿ ಪಡೆದ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕಾಗಮಿಸಿ ಪಿಡಿಒ ಮತ್ತಿತರರ ಜತೆ ಮಾತುಕತೆ ನಡೆಸಿ ವಶ ಪಡಿಸಿಕೊಂಡ ಪಿಕಪ್ ವಾಹನವನ್ನು ಬಿಟ್ಟುಕೊಡುವಂತೆ ರೇಂಜರ್‌ಗೆ ಸೂಚಿಸಿದ ಬಳಿಕ ವೇಣೂರಿಗೆ ತೆರಳಿ ಪಿಕಪ್ ವಾಹನವನ್ನು ತರಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ಯತೀಶ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here