


ಬಂಟ್ವಾಳ: ದ.ಕ.ಜಿಲ್ಲೆಯ ನದಿಯಲ್ಲಿ ಹರಿಯುವ ನೀರಿಗೆ ಅಲ್ಲಲ್ಲಿ ಚೆಕ್ ಡ್ಯಾಂ. ನಿರ್ಮಾಣದ ಪಶ್ಚಿಮ ವಾಹಿನಿ ಯೋಜನೆ ಯ ಕಾಮಗಾರಿಯ ನ್ನು ಮಾಜಿ ಸಚಿವ ಬಿ.ರಮಾನಾಥ ರೈ ವೀಕ್ಷಿಸಿದರು.
ಬಂಟ್ವಾಳ ತಾಲೂಕಿನು ಪಲ್ಗುಣಿ ನದಿಗೆ ಅಡ್ಡಲಾಗಿ ಮೂರು ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗೆ ಚಾಲನೆ ದೊರೆತಿದೆ.
ಈ ಚೆಕ್ ಡ್ಯಾಂ ಮೂಲಕ ಎರಡು ಭಾಗದ ಜನರಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಮೂರು ಚೆಕ್ ಡ್ಯಾಂ ಮೂಲಕ ಆರು ಗ್ರಾಮದ ಸಂಪರ್ಕದ ಕೊಂಡಿಯಾಗಿ ಜನರಿಗೆ ಸಹಾಯವಾಗಲಿದೆ ಎಂದು ಅವರು ಹೇಳಿದರು.
ಕರಿಯಂಗಳ ಗ್ರಾಮದ ಕಡಪುಕರಿಯದಿಂದ ಮನೇಲು ಸಂಪರ್ಕದ ಸೇತುವೆ ಸುಮಾರು 12.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ.
ಪೊಳಲಿ ದೇವಾಲಯಕ್ಕೆ ಮನೇಲಿನಿಂದ ಭಂಡಾರ ಬರಲು ಈ ಡ್ಯಾಂ ಅನುಕೂಲವಾಗಲಿದೆ ಎಂದು ರೈ ಅವರು ಹೇಳಿದರು.
ಸಿದ್ದಕಟ್ಟೆ ಸಮೀಪದ ಕರ್ಪೆ ಎಂಬಲ್ಲಿ 15 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಚೆಕ್ ಡ್ಯಾಂ ನ ವಿನ್ಯಾಸ ಬದಲಾವಣೆಗಾಗಿ ಸರಕಾರಕ್ಕೆ ವಾಪಾಸು ಕಳುಹಿಸಿಕೊಡಲಾಗಿದೆ. 7 ಕೋಟಿ ವೆಚ್ಚದಲ್ಲಿ ಪುಚ್ಚಮೊಗರು ಎಂಬಲ್ಲಿ ಪಲ್ಗುಣಿ ನದಿಗೆ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.
ಪುಚ್ಚಮೊಗರು ಚೆಕ್ ಡ್ಯಾಂ ನಿಂದಾಗಿ ಪುಚ್ಚಮೊಗರು ಬಹುಗ್ರಾಮ ಕುಡಿಯುವ ನೀರಿಗೆ ಪ್ರಯೋಜನ ವಾಗಲಿದೆ.
ಈ ಯೋಜನೆ ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರ ಕೊಡುಗೆಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ರುಗಳಾದ ಬೇಬಿಕುಂದರ್, ಸುದೀಪ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಗದೀಶ ಕೊಯಿಲ, ಪಂ.ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಗ್ರಾ.ಪಂ.ಸದಸ್ಯ ದೇವಪ್ಪ ಕರ್ಕೇರ, ಪ್ರಮುಖರಾದ ಶಿವಾನಂದ ರೈ, ಪ್ರಪುಲ್ಲಾ ರೈ, ಇಂಜಿನಿಯರುಗಳಾದ ಪ್ರಸನ್ನ , ಕೃಷ್ಣಕುಮಾರ್ ಮತ್ತಿತರರು ಉಪಸ್ಥಿತರಿದ್ದರು.





