Friday, October 27, 2023

ಅಡ್ಯನಡ್ಕ: ವಿಶ್ವ ರಕ್ತದಾನ ದಿನಾಚರಣೆ

Must read

ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯ ವಿಜ್ಞಾನ ಸಂಘ ಮತ್ತು ಶ್ಯಾಮಲ ಇಕೋ ಕ್ಲಬ್ ವತಿಯಿಂದ ವಿಶ್ವ ರಕ್ತದಾನ ದಿನವನ್ನು
ಜೂ.14ರಂದು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತ್ರಾ ಅವರು ಮಾತನಾಡಿ,
ರಕ್ತದಾನವು ಅತ್ಯಂತ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ. ರಕ್ತದಾನವನ್ನು ಮಾಡಿ ಜೀವವನ್ನು ಉಳಿಸುವ ಕೆಲಸ ಪವಿತ್ರವಾದದ್ದು ಎಂದು
ಅಭಿಪ್ರಾಯಪಟ್ಟರು. ಬಳಿಕ ಅವರು ಅತಿಸಾರದ ನಿಯಂತ್ರಣ ಮತ್ತು ಓಆರ್‌ಎಸ್ ದ್ರಾವಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ
ಮಾಹಿತಿ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಶಕಿ ಸೂಸಮ್ಮ ಅವರು ಮಳೆಗಾಲದಲ್ಲಿ ಬರುವ ರೋಗಗಳ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ
ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯರಾದ ಟಿ.ಆರ್. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಅಡ್ಯನಡ್ಕ ಆರೋಗ್ಯ
ಕೇಂದ್ರದ ಸಿಬ್ಬಂದಿಗಳಾದ ರಾಧಾ ಸಿಸ್ಟರ್, ವಿಜ್ಞಾನ ಮತ್ತು ಪರಿಸರ ಸಂಘದ ಮಾರ್ಗದರ್ಶಕ ಶಿಕ್ಷಕಿ ಕುಸುಮಾವತಿ ವೇದಿಕೆಯಲ್ಲಿ
ಉಪಸ್ಥಿತರಿದ್ದರು.
ರಶ್ಮಿತಾ ಮತ್ತು ಬಳಗದವರು ಪ್ರಾರ್ಥಿಸಿದರು. ವಿಜ್ಞಾನ ಮತ್ತು ಪರಿಸರ ಸಂಘದ ಅಧ್ಯಕ್ಷೆ ಬಲ್ಕೀಸಾಬಾನು ಸ್ವಾಗತಿಸಿ, ಉಪಾಧ್ಯಕ್ಷ
ರೂಪೇಶ್ ವಂದಿಸಿದರು. ಕಾರ್ಯದರ್ಶಿ ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.

More articles

Latest article