Sunday, October 22, 2023

ಬಂಟ್ವಾಳ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆ

Must read

ಬಂಟ್ವಾಳ: ರಾಜ್ಯ ಸರಕಾರಿ ನೌಕರರ ಸಂಘ (ರಿ.) ಬಂಟ್ವಾಳ ಇದರ 2019 -2024 ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಗೆ ಚುನಾವಣೆ ಗುರುವಾರ ಸರಕಾರಿ ನೌಕರರ ಕಚೇರಿಯಲ್ಲಿ ನಡೆಯಿತು. ಸರಕಾರಿ ನೌಕರರ 24 ಇಲಾಖೆಗಳು ಚುನಾವಣೆಯಲ್ಲಿ ಪ್ರತಿನಿಧಿಸುತ್ತಿದೆ. 35 ಪ್ರತಿನಿಧಿಗಳು ಚುನಾಯಿತರಾಗಿ ಆಯ್ಕೆಯಾಗಬೇಕಾಗಿದೆ.

ಅದರಲ್ಲಿ ಈ ಬಾರಿ 12 ಇಲಾಖೆಗಳ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 10 ಇಲಾಖೆಗಳ ಪ್ರತಿನಿಧಿಗಳು ನಾಮನಿರ್ದೇಶನ ಸದಸ್ಯರಾಗಿ ಆಯ್ಕೆ, ಉಳಿದಂತೆ ಎರಡು ಇಲಾಖೆಗಳ ಪ್ರತಿನಿಧಿಗಳು ಕಾರ್ಯಕಾರಿ ಸಮಿತಿಗೆ ಆಯ್ಕೆಗಾಗಿ ಚುನಾವಣೆ ನಡೆಯಿತು.


ಪ್ರಾಥಮಿಕ ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಯ ಚುನಾವಣೆ ಇಂದು ನಡೆಯುತ್ತಿದೆ.
ಕಂದಾಯ ಇಲಾಖೆ ಯಲ್ಲಿ ಒಟ್ಟು ಎರಡು ಪ್ರತಿನಿಧಿಗಳು ಆಯ್ಕೆಯಾಗಬೇಕಿದ್ದು 5 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 3 ಪ್ರತಿನಿಧಿಗಳು ಆಯ್ಕೆಯಾಗಬೇಕಿದ್ದು, 4 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಬೆಳಿಗ್ಗೆ 11 ರಿಂದ ಸಂಜೆ 4 ,ಗಂಟೆಯವರೆಗೆ ಚುನಾವಣೆ ನಡೆಯುತ್ತದೆ, ಬಳಿಕ 6 ಗಂಟೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ.
ಜೂನ್ 27 ರಂದು ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ನೂತನ ಪದಾಧಿಕಾರಿ ಚುನಾವಣೆ ನಡೆಯಲಿದೆ.
ಚುನಾವಣಾಧಿಕಾರಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ನಾಯಕ್ ರಾಯಿ, ಹಾಗೂ ಮತಗಟ್ಟೆ ಅಧಿಕಾರಿಯಾಗಿ ಕೊಡಂಗೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಭಾಸ್ಕರ್ ರಾವ್ ಕಾರ್ಯ ನಿರ್ವಹಿಸಿದರು.

ಶಿಕ್ಷಣ ಇಲಾಖೆಯ ದೊಡ್ಡ ಕೆಂಪಯ್ಯ, ಪ್ರಾನ್ಸಿಸ್ ಡೇಸಾ, ರವಿಕುಮಾರ್, ಸಂತೋಷ ಕುಮಾರ್.
ಕಂದಾಯ ಇಲಾಖೆಯ ಸೀತಾರಾಮ್, ಜೆ.ಜನಾರ್ಧನ, ಮಲ್ಲೇಶ್, ಮಂಜುನಾಥ್ , ತೌಪೀಕ್ ಅವರು ಕಣದಲ್ಲಿ ಇವರಿಗೆ ಸ್ಪರ್ಧೆ ನಡಯುತ್ತಿದೆ.

More articles

Latest article