ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸ್ಥಾಪಕ ದಿನಾಚರಣೆ ವಿಟ್ಲದ ಚಂದಳಿಕೆ ಭಾರತ್ ಅಡಿಟೋರಿಯಂನಲ್ಲಿ ಭಾನುವಾರ ನಡೆಯಿತು.
ವಿಟ್ಲ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ಕಾರ್‍ಯದರ್ಶಿ ಮನೋಜ್ ಕುಮಾರ್ ರೈ, ಕೋಶಾಧಿಕಾರಿ ಮಹಮ್ಮದ್ ಖಲಂದರ್ ಹಾಗೂ ಲಿಯೋ ಕ್ಲಬ್ ನ ಅಧ್ಯಕ್ಷೆ ಸುಪ್ರೀತ, ಕಾರ್ಯದರ್ಶಿ ಸ್ಮಿತಾ ಸಿ ರೈ, ಕೋಶಾಧಿಕಾರಿ ವೈಭವಿ ಅವರಿಗೆ ಉಪರಾಜ್ಯಪಾಲ ಡಾ.ಗೀತಾಪ್ರಕಾಶ್ ಪದಗ್ರಹಣ ನಡೆಸಿಕೊಟ್ಟರು.
ಉಪರಾಜ್ಯಪಾಲ ಡಾ.ಗೀತಪ್ರಕಾಶ್ ಮಾತನಾಡಿ ಸದಸ್ಯರೆಲ್ಲರೂ ಜತೆಯಾಗಿ ಕೆಲಸ ಮಾಡಿದಾಗ ಕ್ಲಬ್‌ನ ಅಭಿವೃದ್ಧಿ ಸಾಧ್ಯ. ಅಧ್ಯಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಸಬೇಕು. ತಾವು ಮಾಡುವ ಸೇವಾ ಕಾರ್‍ಯದಲ್ಲಿ ಸಂತೃಪ್ತಿ ಪಡೆಯಬೇಕು. ವಿಟ್ಲ ಲಯನ್ಸ್ ಕ್ಲಬ್ ಉತ್ತಮ ಸೇವಾ ಕಾರ್‍ಯಗಳ ಮೂಲಕ ಮಾದರಿಯಾಗಿದೆ ಎಂದರು.
ಜಿಲ್ಲಾ ಕ್ಯಾಬಿನೆಟ್ ಕಾರ್‍ಯದರ್ಶಿ ವಿಜಯ ವಿಷ್ಣು ಮಯ್ಯ ಮಾತನಾಡಿ ವಿಟ್ಲ ಲಯನ್ಸ್ ಕ್ಲಬ್‌ನ ೪೮ ವರ್ಷಗಳ ಸೇವೆ ಶ್ಲಾಘನೀಯ ಹಾಗೂ ಅವಿಸ್ಮರಣೀಯವಾಗಿದೆ. ಸದಸ್ಯರ ಮೇಲೆ ಅಧ್ಯಕ್ಷರು ನಂಬಿಕೆ ಇಟ್ಟು ಅವರಿಗೆ ಜವಾಬ್ದಾರಿ ಕೊಟ್ಟಾಗ ಯಶಸ್ಸಗಳಿಸಲು ಸಾಧ್ಯ ಎಂದರು.
ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಅಂಗನವಾಡಿ ಕೇಂದ್ರಕ್ಕೆ ಫ್ಯಾನ್, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನಸಹಾಯ, ಅನಾರೋಗ್ಯ ಪೀಡಿತ ಮಗುವಿನ ಚಿಕಿತ್ಸೆಗೆ ನೆರವು, ಮದುವೆಗೆ ಧನಸಹಾಯ, ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ಖರೀದಿಸಲು ಧನ ಸಹಾಯ ವಿತರಿಸಿದರು. ಬಳಿಕ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸ್ಥಾಪಕ ಸದಸ್ಯ ಸಿ.ವಿ ಗೋಪಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಎರಡನೇ ಉಪರಾಜ್ಯಪಾಲ ವಸಂತಕುಮಾರ್ ಶೆಟ್ಟಿ, ಮಾಧವ ಜಾಕೆ, ವಿಟ್ಲ ಲಯನ್ಸ್ ಕ್ಲಬ್ ನ ನಿರ್ಗಮನ ಅಧ್ಯಕ್ಷೆ ಜಯ ರೈ, ಮಾಜಿ ಅಧ್ಯಕ್ಷರಾದ ಸತೀಶ್ ಕುಮಾರ್ ಆಳ್ವ, ಸುದರ್ಶನ್ ಪಡಿಯಾರ್, ವಿನ್ನಿ ಮಸ್ಕರೇಂಞಸ್, ನಿರ್ಗಮನ ಲಿಯೋ ಅಧ್ಯಕ್ಷ ಅನ್ವೀಸ್, ಗಾಯಾತ್ರಿ ಗೀತಾಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ಲಯನ್ಸ್ ಕ್ಲಬ್ ಗೆ ಪ್ರಸಾದ್ ಎನ್.ಕೆ, ಪ್ರಮೋದ್ ಕುಮಾರ್ ರೈ, ರಜತ್ ಆಳ್ವ, ರಂಜಿತ್ ಶೆಟ್ಟಿ, ಕೃಷ್ಣ ಕೆ.ಎಂ, ಸಂಜೀವ ಪೂಜಾರಿ , ದಿನೇಶ್ ಶೆಟ್ಟಿ ಪಟ್ಲ ಅವರು ನೂತನವಾಗಿ ಸೇರ್ಪಡೆಗೊಂಡರು. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ನಾಲ್ವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜೆಸಿಂತ ಮಸ್ಕರೇಂಞಸ್, ಮೋಹನ್, ಲಕ್ಷ್ಮಣ್, ಮಾಲತಿ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಮಂಗೇಶ್ ಭಟ್ ವಿಟ್ಲ, ಜಲಜಾಕ್ಷಿ ವಿವಿಧ ಜವಾಬ್ದಾರಿ ನಿಭಾಯಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here