


ಬಂಟ್ವಾಳ: ಕುಲಾಲ ಸೇವಾ ಸಂಘ ಮಾಣಿ ಇದರ 2019-2020 ನೇ ಸಾಲಿನ ನೂತನ ಅಧ್ಯಕ್ಷ ಉಪಾಧ್ಯಕ್ಷ ಸಮಿತಿಯ ಪದಗ್ರಹಣ ಸಮಾರಂಭ ಮಾಣಿ ಕುಲಾಲ ಸೇವಾ ಸಂಘದ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟ ಪೂರ್ವ ಅಧ್ಯಕ್ಷ ಚಂದು ಮಾಸ್ತರ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘಟನೆಯ ಶಕ್ತಿಯಿಂದ ಕುಲಾಲ ಸಮಾಜದ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ಸಂಘಟನೆಯ ನ್ನು ಬಲಪಡಿಸಿ ಎಂದು ಅವರು ಹೇಳಿದರು.
ಸಕಾರಾತ್ಮಕ ವಾದ ಚಟುವಟಿಕೆಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗೋಣ.
ಸಮಾಜಮುಖಿ ಕಾರ್ಯಗಳನ್ನು ಮಾಡುವಾಗ ಹಿಂಜರಿಕೆ ಬಿಟ್ಟು , ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಮುಂದುವರಿಯರಿ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ನೂತನ ತಂಡಕ್ಕೆ ಶುಭಹಾರೈಸಿದರು. ಕಳೆದ ಬಾರಿಯ ದಾಖಲೆ ಪತ್ರಗಳನ್ನು ನೂತನ ಅಧ್ಯಕ್ಷ ಬೋಜನಾರಾಯಣ ಹಾಗೂ ಕಾರ್ಯದರ್ಶಿ ಪದ್ಮನಾಭ ಅವರಿಗೆ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರ ನಡೆಯಿತು.
ಕಾರ್ಯದರ್ಶಿ ನಾರಾಯಣ ಕುಲಾಲ್ ಬಾಳ್ತಿಲ, ನೂತನ ಅಧ್ಯಕ್ಷ ಬೋಜನಾರಾಯಣ ಕುಲಾಲ್ ಗಣೇಶ್ ನಗರ ನೂತನ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಕೊಮ್ಮಕೋಡಿ ಮತ್ತಿತರ ರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಮೇಶ್ ಬರಿಮಾರು ಸ್ವಾಗತಿಸಿ, ಯತಿರಾಜ್ ಮಿತ್ತಪೆರಾಜೆ ವಂದಿಸಿದರು. ಗೋಪಾಲಕೃಷ್ಣ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.





