

ವಿಟ್ಲ: ದಕ್ಷಿಣ ಭಾರತದ ಸುಪ್ರಸಿದ್ಧ ಝಿಯಾರತ್ ಕೇಂದ್ರವಾದ ಮಡವೂರ್ ಸಿ.ಎಂ ಮಖಾಂ ಶರೀಫ್ನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಸಿ.ಎಂ ಅಬೂಬಕ್ಕರ್ ಮುಸ್ಲಿಯಾರ್ (ಖ.ಸಿ.) ರವರ 29 ನೇ ಉರೂಸ್ ಮುಬಾರಕ್ ಜೂನ್ 7ರಿಂದ 11ರ ತನಕ ಹಲವಾರು ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇದೇ ಜೂ.7ರಂದು ಬೆಳಗ್ಗೆ ಧ್ವಜಾರೋಹಣ ಹಾಗೂ ಮಖಾಂ ಝಿಯಾರತ್ ಮೂಲಕ ಚಾಲನೆ ನೀಡಲಾಗುವುದು. ಜೂನ್ 7,8, ಮತ್ತು 9 ಮೂರು ದಿನಗಳಲ್ಲಿ ರಾತ್ರಿ ಖ್ಯಾತ ಪ್ರಭಾಷಣಗಾರರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಜೂ.10 ರಂದು ಸಂಜೆ 7 ಕ್ಕೆ ದ್ಸಿಕ್ರ್ ದುವಾ ಮಹಾ ಸಮ್ಮೇಳನ ನಡೆಯಲಿದೆ. ಸಿ.ಎಂ ಅನುಸ್ಮರಣೆ ಸಮ್ಮೇಳನ ಮಜ್ಲಿಸುನ್ನೂರ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮಗಳೂ ನಡೆಯಲಿದೆ. 11 ರಂದು ಬೆಳಗ್ಗೆ 6ರಿಂದ ಸಂಜೆ 4 ರವರೆಗೆ ಅನ್ನದಾನ ನಡೆಯಲಿದೆ ಎಂದು ಅನಿಲಕಟ್ಟೆ ಸಿ.ಎಂ ಮಡವೂರು ಎಜ್ಯುಕೇಶನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ನ ಕನ್ವೀನರ್ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








