“ಶ್ರೀ ನರೇಂದ್ರ ಮೋದಿ ಅಭಿಮಾನಿಗಳ ಬಳಗ ಹೂಹಾಕುವ ಕಲ್ಲು” ಇವರು ಮೋದಿ ಸರ್ಕಾರದ ಗೆಲುವಿನ ಸಂಭ್ರಮಾಚರಣೆಯನ್ನು ಮಾದರಿಯಾಗಿ ನಡೆಸಿದರು. ಅನಗತ್ಯ ದುಂದು ವೆಚ್ಚಗಳನ್ನು ಮಾಡುವ ಬದಲು ಆರ್ಥಿಕ ಕೊರತೆಯಿರುವ ಎಂಟು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವುದು ಹಾಗೂ ಅನಾಥಾಶ್ರಮಕ್ಕೆ ಸಹಾಯ ಮಾಡುವ ಮುಖಾಂತರ ಮಾನವೀಯತೆಯನ್ನು ಮೆರೆದರು.

ಬಳಗದ ಸದಸ್ಯರಾದ ಶ್ರೀ ಭಾಸ್ಕರ ಕೋಟ್ಯಾನ್, ಶ್ರೀ ರಾಮಕೃಷ್ಣ ಶಾಸ್ತ್ರಿ, ಶ್ರೀ ಶ್ರೀಪತಿ ಭಟ್, ಶ್ರೀ ಸುಖೇಶ್ , ಶ್ರೀ ಭಾಸ್ಕರ ಕಣಂತೂರು ಮತ್ತು ಶ್ರೀ ನವೀನ ಅವರುಗಳು ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ನಮ್ಮ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮ ವಾಸಿಗಳೊಂದಿಗೆ ಕೆಲವು ಸಮಯಗಳನ್ನು ಕಳೆದರು ಹಾಗೂ ಸಂಭ್ರಮಾಚರಣೆಯ ಪ್ರಯುಕ್ತ ಅಕ್ಕಿ ದವಸ ಧಾನ್ಯಗಳನ್ನು ಸೇವಾರೂಪದಲ್ಲಿ ನೀಡಿದರು.

ಭಾರತದ ಪ್ರತಿ ಪ್ರಜೆಗೂ ಶ್ರೀ ನರೇಂದ್ರ ಮೋದಿ ಆಡಳಿತದಲ್ಲಿ ಶಾಂತಿ,ಸುಖ , ಸೌಹಾರ್ದತೆ ಸಿಗಲಿ ಹಾಗೂ ದಾನಿಗಳಿಗೆ ಇನ್ನೂ ಸೇವಾ ಕಾರ್ಯ ಮಾಡುವ ಶಕ್ತಿ ಆ ಭಗವಂತ ನೀಡಲಿ ಎಂದು ನಾವು ಹಾಗೂ ಆಶ್ರಮವಾಸಿಗಳು ಪ್ರಾರ್ಥಿಸುತ್ತೇವೆ.

ನಮ್ಮ ಬಗ್ಗೆ ಮಾಹಿತಿ ಗಾಗಿ www.srisainikethana.org ವೀಕ್ಷಿಸಿ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here