ಬಂಟ್ವಾಳ: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಪೋಲೀಸರು ನಿಪಕ್ಷಪಾತವಾಗಿ ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಅವರು ಬಿಸಿರೋಡಿನ ಪಕ್ಷದ ಕಚೇರಿಯಲ್ಲಿ ಕರೆದ ತಿಳಿಸಿದರು. ‌ಮಿಥುನ್ ರೈ ಮೇಲೆ ಅವ್ಯಾಚ್ಚ ಶಬ್ದಗಳಿಂದ ಘೋಷಣೆ ಕೂಗಿರುವ ಪ್ರಕರಣವನ್ನು ಕಾಂಗ್ರೇಸ್ ಪಕ್ಷ ಖಂಡಿಸುತ್ತೇವೆ.

ಲೋಕಸಭಾ ಚುನಾವಣಾ ಬಳಿಕ ವಿಜಯೋತ್ಸವ ಸಂದರ್ಭದಲ್ಲಿ ಪ್ರಚೋದನಾಕಾರಿ ರೀತಿಯಲ್ಲಿ ಘೋಷಣೆ ಮಾಡಿರುವುದು ಅಕ್ಷಮ್ಯ ಅಪರಾಧ ಹಾಗೂ ಪೋಲೀಸರು ಈ ಬಗ್ಗೆ ಕಠಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಅವರಿಗೆ ಅಭಿನಂದನೆ.
ಪೋಲೀಸರಿಗೆ ಕಾನೂನು ಕ್ರಮ ಕೈಗೊಳ್ಳದಂತೆ ಚುನಾಯಿತ ಪ್ರತಿನಿಧಿಗಳಿಂದ ಒತ್ತಡಗಳು ಹಾಕಿದ್ದಾರೆ ಎಂಬ ಖಚಿತವಾದ ಮಾಹಿತಿ ಇದೆ.‌
ಇಂತಹ ಯಾವುದೇ ಒತ್ತಡ ಕ್ಕೆ ಮಣಿಯದೆ ಪೋಲೀಸರು ಕೆಲಸ ಮಾಡುವಂತೆ ಮನವಿ ಮಾಡಿದರು.
ಈ ಪ್ರಕರಣದ ಆರೋಪಿಗಳು ಕೇರಳದ ಕೊಲೆ ಪ್ರಕರಣದ ಆರೋಪಿಗಳು. ಹಾಗಾಗಿ ಚುನಾಯಿತ ಜನಪ್ರತಿನಿಧಿಗಳು ಇವರ ಪರ ನಿಂತು ಸಹಾಯ ಮಾಡಬಾರದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಈ ಹಿಂದೆ ನಡೆದ ಕೊಲೆಗಳ ಆರೋಪಿಗಳು ಯಾರು. ಕಲ್ಲು ತೂರಾಟಗಳು ಮಾಡಿದ್ದು ಯಾರೂ ? ಅದು ಎರಡು ಮತೀಯ ಸಂಘಟನೆಗಳು, ರಾಷ್ಟ್ರೀಯ ಪಕ್ಷಗಳ ಅಂಗ ಪಕ್ಷಗಳು ಎಂದು ಅವರು ಹೇಳಿದರು.
ಕೊಲೆ ಆರೋಪದಲ್ಲಿ ಕಾಂಗ್ರೇಸ್ ಪಕ್ಷದ ಯಾವ ಕಾರ್ಯಕರ್ತನು ಇಲ್ಲ ಎಂಬುದು ಸತ್ಯವಿಚಾರ ಎಂದರು. ಚುನಾವಣಾ ಸಂದರ್ಭದಲ್ಲಿ ನನ್ನ ಬಗ್ಗೆ ಅಪಪ್ರಚಾರಗಳು ನಡದಿವೆ. ಅಕ್ಕಿ ಬರುವುದನ್ನು ನಿಲ್ಲಿಸಿಲ್ಲ, ಅದಕ್ಕೆ ಬರುವ ಹಣವನ್ನು ನಿಲ್ಲಿಸಿದ್ದೇನೆ , ದೇವರ ದುಡ್ಡು ದುರುಪಯೋಗ ಆಗಬಾರದು ಎಂಬುದೇ ನನ್ನ ಯೋಚನೆಯಾಗಿತ್ತು.

ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ  ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here