ಬಂಟ್ವಾಳ : 1008 ಭಗವಾನ್ ಶ್ರೀ ಆದಿನಾಥ ಸ್ವಾಮಿ ಜಿನಚೈತ್ಯಾಲಯ ಇದರ ಜಿನಬಿಂಬ ಪ್ರತಿಷ್ಟಾ ಮಹೋತ್ಸವದ ೫೦ನೇವರ್ಧಂತ್ಯೋತ್ಸವದ ಅಂಗವಾಗಿ ಬಂಟ್ವಾಳ ಜೈನ್ ಮಿಲನ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಭಗವಾನ್ ಶ್ರೀ ಆದಿನಾಥ ಸ್ವಾಮಿಜಿನ ಚೈತ್ಯಾಲಯದಲ್ಲಿ ಜರಗಿತು.

ಹಸಿ-ಮಸಿ,  ವಾಣಿಜ್ಯ ಮುಂತಾದ 72 ಉತ್ತಮ ಕಲೆಗಳ ಪ್ರವರ್ತಕರು, ಆದಿ ಪ್ರವರ್ತಕರಾದ ಭಗವಾನ್ 1008 ಶ್ರೀ ಆದಿನಾಥ    ತೀರ್ಥಂಕರರಸೇವೆ ಮಾಡುವುದರಿಂದ ಆತ್ಮ ಕಲ್ಯಾಣ ಸಾಧ್ಯ. ಅದರಂತೆ ಶ್ರಾವಕರು ಪಂಚಾಣು ವೃತ ಪಾಲನೆ, ಅನುಯೋಗಗಳ ಅಧ್ಯಯನ ಮತ್ತುಷಟ್ಕಾರ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೂಡಬಿದ್ರೆ ಜೈನ ಮಠದ ಭಾರತಭೂಷಣ ಸ್ವಸ್ತಿಶ್ರೀ    ಚಾರುಕೀರ್ತಿ ಭಟ್ಟಾರಕಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನವಿತ್ತರು.

ಬಂಟ್ವಾಳ ಬಸದಿ ಹಾಗೂ ಪರಿಸರದ ಬಗ್ಗೆ ತನ್ನ ಬಾಲ್ಯದ ದಿನಗಳನ್ನು ಹಂಚಿಕೊಂಡರು. ಬಂಟ್ವಾಳದ ಶ್ರಾವಕರು ಎಲ್ಲರನ್ನೂ ಒಗ್ಗೂಡಿಸಿಕೊಂಡುಬಸದಿಯ ಕೆಲಸಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಡಿ.ಹರ್ಷೇಂದ್ರ ಕುಮಾರ್ ನುಡಿದರು. ಭಾರತೀಯಜೈನ್ ಮಿಲನ್ ಮಂಗಳೂರು ವಿಭಾಗದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ಬಂಟ್ವಾಳ ಇದರ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಸಿದ್ದಕಟ್ಟೆ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ವಲಯ-೮ರ ಉಪಾಧ್ಯಕ್ಷ ಸುದರ್ಶನ್ ಜೈನ್ , ಭಾರತೀಯ ಜೈನ್ಮಿಲನ್ ಮಂಗಳೂರು ವಿಭಾಗ ದ ಜಯರಾಜ್ ಕಂಬಳಿ, ಮಂಗಳೂರು ವಿಭಾಗ ವಲಯ-೮ರ ಕಾರ್ಯದರ್ಶಿ ಸುಭಾಸ್ಚಂದ್ರ ಜೈನ್ ಉಪಸ್ಥಿತರಿದ್ದರು.

ದೀಪಕ್ ಕುಮಾರ್ ಇಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ವಂದಿಸಿ ಹರ್ಷರಾಜ್ ಬಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here