ಮಂಗಳೂರು: ಚಿಂತನ ಸಾಂಸ್ಕೃತಿಕ ಬಳಗ (ರಿ) ಆಕಾಶಭವನ ಮಂಗಳೂರು ಇದರ ಆಶ್ರಯದಲ್ಲಿ *ಚಿತ್ತಾರ2019* ಮಕ್ಕಳ ಬೇಸಿಗೆ ಶಿಬಿರ, ಆಕಾಶಭವನದ ಪರಪಾದೆ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಹಿರಿಯ ಪತ್ರಕರ್ತ, ವಾರ್ತಾಭಾರತಿ ಮಂಗಳೂರು ವಿಭಾಗದ ಮುಖ್ಯಸ್ಥ ಪುಷ್ಪರಾಜ್ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಪ್ರವಾಹದಲ್ಲಿ ಮುಳುಗುವವರಿಗೆ ಹುಲ್ಲು ಕಡ್ಡಿ ಆಸರೆ. ಅದರಿಂದಲೇ ಬದುಕಬಹುದು ಎಂದಲ್ಲ. ಆ ಕ್ಷಣದಲ್ಲಿ ಅದು ಮಾನಸಿಕ ಧೈರ್ಯ ಸಿಗುತ್ತದೆ. ಅದೇ ರೀತಿ, ಇಂತಹ ಶಿಬಿರಗಳು ಮಕ್ಕಳ ಭವಿಷ್ಯದಲ್ಲಿ ಆತ್ಮಶಕ್ತಿ ಹೆಚ್ಚಿಸುತ್ತದೆ ಎಂದು ಪುಷ್ಪರಾಜ್ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕಲಾವಿರಾದ ಮೈಮ್ ರಾಮದಾಸ್ ವಹಿಸಿದ್ದರು ಮುಖ್ಯ ಅತಿಥಿ ಗಳಾಗಿ ರಂಗ ಸ್ವರೂಪ ದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತ್ ಬೈಲ್, ವಕೀಲರಾದ ಕೆ. ಶ್ರೀಪತಿ ಪ್ರಭು, ಚಿಂತನ ಬಳಗದ ಅಧ್ಯಕ್ಷ ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು, ಶಿಬಿರ ಸಂಯೋಜಕ ಸುಕೇಶ್ ಶೆಟ್ಟಿ ಸ್ವಾಗತಿಸಿದರು, ಶಿಬಿರದ ನಿರ್ದೇಶಕರಾದ ಪ್ರೇಂನಾಥ್ ಮರ್ಣೆ ಪ್ರಸ್ತಾಪಿಸಿದರು, ದಯಾನಂದ ವಂದಿಸಿದರು.
ಕಮಲಾಕ್ಷ ಶೆಟ್ಟಿ, ರೇಖಾ ಕುಂದರ್, ಚಿತ್ರ ಲೇಖಾ, ಯಕ್ಷಿತ್, ಸುಜನ್, ವಿನೀತ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here