ಬಂಟ್ವಾಳ: ಖಾಸಗಿ‌ಬಸ್ ಮಾಲಕ, ಕಾಂಗ್ರೇಸ್ ಕಾರ್ಯಕರ್ತ, ಪರಸಭಾ ಮಾಜಿ ನಾಮನಿರ್ದೇಶನ ಸದಸ್ಯ ಮೆದುಳಿನ ಕಾಯಿಲೆಯಿಂದ ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಲೊರೆಟ್ಟೋಪದವು ಮಂಡಾಡಿ ನಿವಾಸಿ ಪಿಯೂಸ್ ರೊಡ್ರಿಗಸ್ ಅವರ ಪುತ್ರ
ನೊರ್ಬಟ್ ಡಿ.ಸೋಜ. (50) ಬ್ರೈನ್ ಎಮರೇಜ್ ನಿಂದ ಅಸುನೀಗಿದ್ದಾರೆ.
ನೊರ್ಬಟ್ ಅವರು ನಿನ್ನೆ ಬುಧವಾರ ಸಂಜೆಯ ವೇಳೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ ಎಂದು‌ ತುಂಬೆ ಆಸ್ಪತ್ರೆ ದಾಖಲು ಮಾಡಲಾಗಿತ್ತು. ‌
ಆದರೆ ಅವರಿಗೆ ರಕ್ತದ ಒತ್ತಡ ಜೊತೆ ಮೆದುಳಿನ ಸಮಸ್ಯೆ ಯಿರುವುದರಿಂದ ಹೆಚ್ಚಿನ ಚಿಕಿತ್ಸೆಯ ಉದ್ದೇಶದಿಂದ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆದರೆ ಇಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಗುರುವಾರ ಮಧ್ಯಾಹ್ನ 3.50 ಗಂಟೆಯ ವೇಳೆ ಇವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಬಂಟ್ವಾಳ ಖಾಸಗಿ ಬಸ್ ಏಜೆಂಟ್ ಮೂಲಕ ಚಿರಪರಿಚಿತ ರಾಗಿರುವ ಇವರು ಪ್ರಸ್ತುತ ನಿತ್ಯಾಧರ ಎಂಬ ಹೆಸರಿನ ಐದು ಬಸ್ ಗಳ ಮಾಲಕರಾಗಿದ್ದಾರೆ.
ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು ಕಳೆದ ಅವಧಿಯಲ್ಲಿ ಪುರಸಭೆಯ ನಾಮನಿರ್ದೇಶನ ಸದಸ್ಯ ರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪುರಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ನಡೆಸಿ ಪರಾಜಯಗೊಂಡಿದ್ದರು. ಆದರೆ ಸಾಮಾಜಿಕ, ರಾಜಕೀಯವಾಗಿ ತೊಡಗಿಸಿಕೊಂಡ ಇವರು ಬಸ್ ಮುನ್ನ ಎಂದೇ ಪರಿಚಿತರಾಗಿದ್ದರು.
ಇವರು ಪತ್ನಿ ಬಬಿತಾ ಹಾಗೂ ಒರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇವರ ಸಂಬಂಧಿಕರು ವಿದೇಶದಲ್ಲಿದ್ದು , ಅವರ ಬರುವಿಕೆಗಾಗಿ
ನೊರ್ಬಟ್ ಅವರ ಮೃತದೇಹ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಯ ಶೀಥಲೀಕರಣದಲ್ಲಿ ಇಡಲಾಗಿದ್ದು ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.‌
ಬಂಟ್ವಾಳ ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿಕುಂದರ್, ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಮಾಜಿ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಮತ್ತಿತರರು ಆಸ್ಪತ್ರೆ ಗೆ ಬೇಟಿ ನೀಡಿ ಅಂತಿಮ ದರ್ಶನ ಪಡೆದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here