Sunday, October 22, 2023

ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಕರಣಿಕ ಎಸಿಬಿ ಬಲೆಗೆ

Must read

ಬೆಳ್ತಂಗಡಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಕಂದಾಯ ಇಲಾಖೆಗೆ ಸೇರಿದ ಸಿಬ್ಬಂದಿಯೋರ್ವ ಎಸಿಬಿ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಖಚಿತವಾದ ಮಾಹಿತಿಯನ್ನು ಪಡೆದು ಬೆಳ್ತಂಗಡಿಯಲ್ಲಿ ಈ ದಾಳಿ ನಡೆಸಲಾಗಿದೆ.

ಬೆಳ್ತಂಗಡಿ ತಾಲೂಕು ಕಚೇರಿಯಲ್ಲೇ ಲಂಚ ಪಡೆಯುತ್ತಿದ್ದ ಕಡಿರುದ್ಯಾವರ- ಮಿತ್ತಬಾಗಿಲು ಗ್ರಾಮ ಕರಣಿಕ ಮತ್ತು ಸಹಾಯಕ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.ವಿ.ಎ. ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ ಎಸಿಬಿ ಬಲೆಗೆ ಬಿದ್ದವರು. ಆರ್.ಟಿ.ಸಿ. ಹೆಸರು ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇವರಿಬ್ಬರನ್ನು ಎಸಿಬಿ ರೆಡ್ ಹ್ಯಾಂಡಾಗಿ ಸೆರೆ ಹಿಡಿದಿದೆ. ಮಿತ್ತಬಾಗಿಲಿನ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಗೌಡ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಈ ಕಾರ್ಯಾಚರಣೆ ನಡೆಸಿದೆ. ಆರ್.ಟಿ.ಸಿ. ನಲ್ಲಿರುವ ಹೆಸರು ಬದಲಾವಣೆಗೆಂದು ವಿ.ಎ. ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ 5 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಅದರಂತೆ ಪ್ರದೀಪ್‌ರಿಂದ ಶುಕ್ರವಾರ ರಮೇಶ್ ನಾಯ್ಕ್ ಎರಡು ಸಾವಿರ ರೂ. ಪಡೆದಿದ್ದರು ಎಂದು ಹೇಳಲಾಗಿದೆ. ಎಸಿಬಿ ಸೂಚನೆಯಂತೆ ಇಂದು ಬೆಳಗ್ಗೆ ಮತ್ತೆ ಮೂರು ಸಾವಿರ ನೀಡುತ್ತಿದ್ದ ವೇಳೆ ಈ ದಾಳಿ ನಡೆಸಿದ್ದಾರೆ.

More articles

Latest article