


ಬಂಟ್ವಾಳ: ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯಾದ ಮರಿಯಮ್ ಹಾಶ್ಮಿ 603 ಅಂಕವನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆ ಬೋಗೊಡಿ ಬಿ.ಎಂ. ಇಲ್ಯಾಸ್ ಹಾಗೂ ಆಯಿಶ ದಂಪತಿಯ ಪುತ್ರಿಯಾಗಿರುತ್ತಾಳೆ. ಇವಳಿಗೆ ತೌಹೀದ್ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ-ರಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.





